ಸುಳ್ಯ:ಬಿ ಎಂ ಎಸ್ ಸಂಯೋಜಿತ ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ ಎಡಮಂಗಲ ಘಟಕ ಉದ್ಘಾಟಿಸಲಾಯಿತು.
ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ಅಧ್ಯಕ್ಷರಾದ ಪಿ ಗೋಪಾಲಕೃಷ್ಣ ಭಟ್ ಪೈಚಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚಾಲಕರು ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಂಡು ಸಂಘಟನೆಗೂ ಸಮಯ ಮೀಸಲಿಟ್ಟುಕೊಂಡು ಯಶಸ್ವಿಯಾಗಿ ಜೀವನವನ್ನು
ಮುಂದುವರಿಸಿ ಎಂದು ಹೇಳಿದರು. ಎಡಮಂಗಲ ಪ್ರಾಥಮಿಕ ಕೃಷಿಪತ್ತಿನ ಅಧ್ಯಕ್ಷ ರಾಮಕೃಷ್ಣ ರೈ, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ ಜಾಲ್ತಾರ್,ಹಾಲು ಉತ್ಪಾದಕರ ಒಕ್ಕೂಟದ ಸಂಘದ ಅಧ್ಯಕ್ಷ ದಾಮೋದರ ಗೌಡ ಲೆಕ್ಕಸಿರಿಮಜಲು, ವಿಶ್ವ ಹಿಂದೂ ಪರಿಷತ್ತು ಭಜರಂಗದಳ ಅಧ್ಯಕ್ಷ ಈಶ್ವರ ಗೌಡ ಜಾಲ್ತಾರು, ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್ಎಂ ಮಾತನಾಡಿದರು. ಸುಳ್ಯ ತಾಲೂಕು ಆಟೋರಿಕ್ಷಾ ಚಾಲಕರ ಸಂಘ ಅಧ್ಯಕ್ಷ ಪ್ರಕಾಶ್ ಎಂ ಎಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೋಶಾಧಿಕಾರಿ ರವಿ ಎಸ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ (ಗಣೇಶ) ಜಾಲ್ತಾರ್
ಕಾರ್ಯದರ್ಶಿಯಾಗಿ ಸುಮಂತ್ ಡೆಕ್ಕೆಳ
ಕೋಶಾಧಿಕಾರಿಯಾಗಿ ರೋಹಿತ್ ನಡುಬೈಲು ನಿರ್ದೇಶಕರಾಗಿ ಪ್ರೇಮರಾಜ್ ಮಾಧವ, ಸುಂದರ, ಸಂತೋಷ್, ತೀರ್ಥಾನಂದ
ದಿನೇಶ್ ಬಿ ಆಯ್ಕೆಯಾದರು.
ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಗಿರೀಶ್ ನಡುಬೈಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಕಾರ್ಯದರ್ಶಿ ಸುಮಂತ್ ಡೆಕ್ಕೆಳ ವಂದಿಸಿದರು.





