ಪೆರುವಾಜೆ:ಬೆಳ್ಳಾರೆ ಡಾ. ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಳ್ಳಾರೆ- ಪೆರುವಾಜೆ ಇಲ್ಲಿ ಅರ್ಥಶಾಸ್ತ್ರ ವಿಭಾಗದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ ಇಲ್ಲಿನ ಅರ್ಥಶಾಸ್ತ್ರ ಸಹ ಪ್ರಾಧ್ಯಪಕರು ಹಾಗೂ ವಿಭಾಗಮುಖ್ಯಸ್ಥರು ಆಗಿರುವ ಪ್ರೊ. ಉದಯ ಶಂಕರ ಹೆಚ್
ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ “ಪರಸ್ಪರ ಬೇಡಿಕೆ ಮತ್ತು
ವಿನಿಮಯ ದರ” ವಿಷಯದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಬಾಲಸುಬ್ರಹ್ಮಣ್ಯ ಪಿ ಎಸ್ ರವರು ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ.ರಾಮಚಂದ್ರ.ಕೆ ಮತ್ತು ಎಕನಾಮಿಕ್ಸ್ ಅಸೋಸಿಯೇಷನ್ ನ ಕಾರ್ಯದರ್ಶಿ ಸುಜಿತ್ ಸಿ, ದ್ವಿತೀಯ ಬಿ. ಎ. ಹಾಗೂ ಸಹ ಕಾರ್ಯದರ್ಶಿ ಪ್ರತಿಜ್ಞಾಕುಮಾರಿ ಪ್ರಥಮ ಬಿ. ಎ. ಇವರು ಉಪಸ್ಥಿತರಿದ್ದರು. ಸ್ವಾತಿ ಮತ್ತು ಬಳಗ ಪ್ರಾರ್ಥಿಸಿದರು ಮತ್ತು ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಮಾಲತಿ.ಎಂ ಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ರಕ್ಷಿತ್ ಎಮ್, ದ್ವಿತೀಯ ಬಿ. ಎ. ಇವರು ಸ್ವಾಗತಿಸಿ, ಸರಿತಾ, ದ್ವಿತೀಯ ಬಿ ಎ ಇವರು ವಂದನಾರ್ಪಣೆಗೈದರು. ಪುನೀತ್ ಕುಮಾರ್ ದ್ವಿತೀಯ ಬಿ.ಎ. ಇವರು ಸಂಪನ್ಮೂಲ ವ್ಯಕ್ತಿಯನ್ನು ಸಭೆಗೆ ಪರಿಚಯಿಸಿದರು. ಚರಣ್, ದ್ವಿತೀಯ ಬಿ. ಎ. ಕಾರ್ಯಕ್ರಮವನ್ನು ನಿರೂಪಿಸಿದರು.









