ನವದೆಹಲಿ: ಅಫ್ಗಾನಿಸ್ತಾನದ ಹಿಂದೂಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಉಂಟಾದ ಪ್ರಬಲ ಭೂಕಂಪದಲ್ಲಿ ಪಾಕಿಸ್ಥಾನದಲ್ಲಿ 9 ಹಾಗು ಅಪಘಾನಿಸ್ಥಾನದಲ್ಲಿ 2 ಮಂದಿ ಸಾವನ್ನಪ್ಪಿ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ರಾತ್ರಿ 10.17ಕ್ಕೆ 6.8 ತೀವ್ರತೆಯ ಭೂಕಂಪನವಾಗಿದೆ. ಉತ್ತರ ಭಾರತದಲ್ಲೂ ಪ್ರಬಲ ಕಂಪನದ
ಅನುಭವವಾಗಿದೆ.ಭೂಕಂಪದ ಕೇಂದ್ರಬಿಂದು ಅಫ್ಗಾನಿಸ್ತಾನದ ಜುರ್ನ್ನಲ್ಲಿ 180 ಕಿಲೋಮೀಟರ್ ಆಳದಲ್ಲಿದೆ. ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರಬಲ ಭೂಕಂಪದ ಅನುಭವವಾಗಿದೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲೂ ಭೂಕಂಪದ ಅನುಭವವಾಗಿದೆ.
ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪನದಿಂದ 9 ಮಂದಿ ಸಾವನ್ನಪ್ಪಿ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.