ನವದೆಹಲಿ: ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಉತ್ತರ ಭಾರತದ ವಿವಿಧೆಡೆ ಭೂಕಂಪನ ಉಂಟಾಗಿದೆ. ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಭೂಕಂಪನ ಸಂಭವಿಸಿದ್ದು ತೀವ್ರತೆ ರಿಕ್ಟರ್ ಮಾಪಕದಲ್ಲಿ 5.4 ದಾಖಲಾಗಿದೆ.ನಂತರ ದೆಹಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಭೂಮಿಯು ಕೆಲವು
ಸೆಕೆಂಡುಗಳ ಕಾಲ ಕಂಪಿಸಿದ ಅನುಭವದಿಂದ ಜನ ಭಯಭೀತರಾಗಿದ್ದಾರೆ. ಜನರು ಮನೆ, ಕಟ್ಟಡಗಳಿಂದ ಹೊರ ಬಂದಿದ್ದಾರೆ. ಈ ಭೂಕಂಪದಿಂದ ಯಾವುದೇ ಪ್ರಾಣಹಾನಿಯಾಗಲೀ, ಆಸ್ತಿಪಾಸ್ತಿಯಾಗಲೀ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.ಭೂಕಂಪದ ಕೇಂದ್ರಬಿಂದು ದೋಡಾದ ಗಂಡೋ ಭಲೇಸಾ ಗ್ರಾಮದಿಂದ 18 ಕಿ.ಮೀ ದೂರದಲ್ಲಿ 30 ಕಿ.ಮೀ ಆಳದಲ್ಲಿದೆ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ಈ ಭೂಕಂಪದ ಪ್ರಭಾವದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ, ಪಂಜಾಬ್ ಸೇರಿದಂತೆ ಹಲವು ಉತ್ತರ ಪ್ರದೇಶಗಳಲ್ಲಿ ಭೂಕಂಪಗಳು ಸಂಭವಿಸಿವೆ. ಹಲವುವ ಜಡೆ 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ ಎಂದು ವರದಿಯಾಗಿದೆ