ಜಕಾರ್ತ: ಶುಕ್ರವಾರ ಬೆಳಗ್ಗೆ ಪೂರ್ವ ಇಂಡೋನೇಷ್ಯಾದ ಉತ್ತರ ಮಲುಕು ಎಂಬಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ, ಆದರೆ ಯಾವುದೇ ಸಾವು–ನೋವು ಅಥವಾ ಹಾನಿ ಸಂಭವಿಸಿಲ್ಲ ಎಂದು


ವರದಿಯಾಗಿದೆ.ಭೂಕಂಪವು ಶುಕ್ರವಾರ ನಸುಕಿನ 03:02ರ ವೇಳೆಯಲ್ಲಿ ಸಂಭವಿಸಿದೆ. ಅದರ ಕೇಂದ್ರಬಿಂದುವನ್ನು ಮೊರೊಟೈ ಜಿಲ್ಲೆಯ ವಾಯುವ್ಯಕ್ಕೆ 133 ಕಿ.ಮೀ ದೂರದಲ್ಲಿ, ಸಮುದ್ರತಳದ 112 ಕಿ.ಮೀ ಆಳದಲ್ಲಿ ಗುರುತು ಮಾಡಲಾಗಿದೆ.ಗುರುವಾರ ತಜಕಿಸ್ತಾನದಲ್ಲೂ 6.8ರ ತೀವ್ರತೆಯ ಭೂಕಂಪ ಸಂಭವಿಸಿತ್ತು. ಎರಡು ವಾರಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ಉಂಟಾದ ಭೂಕಂಪದಲ್ಲಿ ಈ ವರೆಗೆ 47 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.