ಸುಳ್ಯ: ಭಾರೀ ಮಳೆಗೆ ಸುಳ್ಯ ಗಾಂಧಿನಗರ ಸಮೀಪ ಗುರುಂಪು ಬಳಿಯಲ್ಲಿ ಗುಡ್ಡ ಕುಸಿತ ಉಂಟಾಗಿರುವ ಪ್ರದೇಶಕ್ಕೆ ಪುತ್ತೂರು ಉಪ ವಿಭಾಗದ ಡಿವೈಎಸ್ಪಿ ಗಾನಾ ಪಿ ಕುಮಾರ್ ಹಾಗೂ ಇತರ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿ ಗಾನಾ ಕುಮಾರ್ ಅವರು ಸ್ಥಳದಲ್ಲಿ ತಹಶೀಲ್ದಾರ್ ಮಂಜುನಾಥ್ ಹಾಗೂ ಇತರ
ಅಧಿಕಾರಿಗಳ ಜೊತೆ ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದರು. ಗುಡ್ಡ ಇನ್ನಷ್ಟು ಕುಸಿಯುವ ಭೀತಿ ಇದ್ದು ಪ್ರದೇಶದ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಯಿತು. ಅಗತ್ಯ ಬಿದ್ದಲ್ಲಿ ಸಮೀಪದ ಮನೆಯವರನ್ನು ಸ್ಥಳಾಂತರ ಮಾಡುವುದು ಸೇರಿದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವುದು ಮತ್ತು ಗುಡ್ಟ ಇನ್ನಷ್ಟು ಕುಸಿಯದಂತೆ ಅಗತ್ಯ ಕ್ರಮ ಕೈಗೊಳ್ಳಲು ನಗರ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಲಾಯಿತು. ಗುಡ್ಡದ ಕೆಳ ಭಾಗದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಯುತು.ನಗರದ ಟಾಸ್ಕ್ ಪೋರ್ಸ್ ತಂಡ ಸನ್ನದ್ಧರಾಗಿರಲು ಸೂಚನೆ ನೀಡಲಾಯಿತು.
ಸುಳ್ಯ ಎಸ್ಐ ಈರಯ್ಯ ದೂಂತೂರು, ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಗ್ರಾಮ ಕರಣಿಕಾರಾದ ತಿಪ್ಪೇಶ್, ಸ್ಥಳೀಯರಾದ ಶಹೀದ್ ಪಾರೆ, ಬಶೀರ್ ನ್ಯಾಷನಲ್ ಮತ್ತಿತರರು ಉಪಸ್ಥಿತರಿದ್ದರು.
ಇಂದು ಬೆಳಿಗ್ಗೆ ಬಾರೀ ಮಳೆಗೆ ಗುರುಂಪು ಸಮೀಪ ಗುಡ್ಡ ಕುಸಿದು ಕಟ್ಟಡದ ಮೇಲೆ ಬಿದ್ದಿತ್ತು. ಸಮೀಪದಲ್ಲಿ
ಮನೆಯ ಕಂಪೌಂಡ್ ಒಂದು ಕುಸಿದು ಬಿದ್ದಿತ್ತು.