ಪುತ್ತೂರು: ಪಕ್ಷದಲ್ಲಿ 30 ವರ್ಷಗಳ ಕಾಲ ಸುದೀರ್ಘ ಕೆಲಸ ಮಾಡುವ ಅವಕಾಶ ಸಿಕ್ಕಿದೆ. 30 ವರ್ಷ ಕಳೆದ ಬಳಿಕ ದೇವರಿಗೆ ಭಕ್ತಿಯ ನಮನ ಸಲ್ಲಿಸಲು ಬಂದಿದ್ದೇನೆ. ಚುನಾವಣಾ ರಾಜಕಾರಣದಿಂದ ದೂರ ಉಳಿದು ಪಕ್ಷದ ಜೊತೆ ನಿರಂತರ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ
ಮಾತನಾಡಿದ ಅವರು, ನಮ್ಮಲ್ಲಿ ನರೇಂದ್ರ ಮೋದಿ ಪರಿಕಲ್ಪನೆಯ ಸಂಘಟನೆ ಇದೆ. ಅವರ ಸ್ವಾರ್ಥ ರಹಿತ ರಾಜಕಾರಣವನ್ನು ಮುಂದುವರಿಸಿಕೊಂಡು ಎಲ್ಲಾ ಕಡೆ ಹೋಗಬೇಕು. ಅದು ಕೇವಲ ನರೇಂದ್ರ ಮೋದಿ, ಡೆಲ್ಲಿಗೆ ಸೀಮಿತ ಆಗಬಾರದು. ಎಲ್ಲಾ ರಾಜ್ಯಗಳಲ್ಲೂ ಅದು ಜಾರಿ ಆಗಬೇಕು. ಕೆಳಗಿನ ಹಂತದವರೆಗೂ ಹೋಗಬೇಕು. ಪರಿವಾರವಾದದಿಂದ ಮುಕ್ತರಾಗಬೇಕು. ಭ್ರಷ್ಟಾಚಾರ, ಜಾತಿವಾದದಿಂದ ಮುಕ್ತರಾಗಬೇಕಾದ ರಾಜನೀತಿ ಇರಬೇಕು.ಖಂಡಿತವಾಗಿ ಮುಂದೆ ಶುದ್ದೀಕರಣ ಮಾಡುವ ಕೆಲಸ ಮಾಡುತ್ತೇವೆ. ಈಗ ನರೇಂದ್ರ ಮೋದಿಯವರ ಚುನಾವಣೆ ಒಂದೇ ನಮಗಿರುವಂತದ್ದು, ನಮ್ಮ ಭಾಗದಿಂದಲೂ ಎಲ್ಲರನ್ನು ಕಳುಹಿಸಿಕೊಡಬೇಕು ಎಂದರು. ಪಕ್ಷ ನನಗೆ ಎಲ್ಲಾ ಕೊಟ್ಟಿದೆ. ಆ ಪಕ್ಷಕ್ಕೆ ನಾನು ಏನಾದರೂ ಕೊಡಬೇಕಿದೆ. ನರೇಂದ್ರ ಮೋದಿಯಂತಹ ದೈವಾಂಶ ಶಂಭೂತ ದೇಶದ ಎಲ್ಲವನ್ನು ಸರಿ ಮಾಡಲು ಹೊರಟಿದ್ದಾರೆ. ಅದನ್ನು ಕೆಳಗಿನ ಹಂತದಲ್ಲಿ ತಗೊಂಡು ಹೋಗುವ ಜವಬ್ದಾರಿ ನಮ್ಮದು ಎಂದರು.
ನಾನು ಚುನಾವಣಾ ರಾಜಕೀಯದಿಂದ ದೂರ ನಿಂತಿದ್ದೆ. ಆದರೆ ನೀವು ರಾಜ್ಯದ ಮಾಜಿ ಮುಖ್ಯಮಂತ್ರಿ ಹೀಗಾಗಿ ಸ್ಪರ್ಧೆ ಮಾಡಬೇಕೆಂದು ಹೇಳಿದರು.ಹೀಗಾಗಿ ನಾನು ಮುಂದೆ ಹೋದೆ. ನನ್ನ ಪ್ರಾಮಾಣಿಕತೆ, ಸ್ವಚ್ಚಾರಿತ್ರ್ಯಕ್ಕೆ ಯಾರ ಸರ್ಟಿಫಿಕೇಟ್ ಸಹ ಬೇಕಾಗಿಲ್ಲ. ಆದರೆ ಕರ್ನಾಟಕ ರಾಜ್ಯದಲ್ಲಿ ನಿಯತ್ತು, ಪ್ರಾಮಾಣಿಕತೆ ಎಂಬ ಶಬ್ದಗಳಿಗೆ ಅರ್ಥ ಕಳೆದುಕೊಳ್ಳುವ ರಾಜನೀತಿ ಇದೆ. ಇದು ಮನಸ್ಸಿಗೆ ಅತ್ಯಂತ ನೋವಿನ ಸಂಗತಿ. ಚುನಾವಣೆವರೆಗೂ ಆ ನೋವನ್ನು ನುಂಗಿಕೊಳ್ಳಬೇಕು ಎಂದರು.









