ಪೇರಡ್ಕ:ಮುಹಿಯಾದ್ದಿನ್ ರಿಪಾಯಿ ದಫ್ ಅಸೋಸಿಯೇಷನ್ ನೇತೃತ್ವದಲ್ಲಿ ತಾಲೂಕು ಮಟ್ಟದ ಮದ್ರಸ ಮಕ್ಕಳ ದಫ್ ಪ್ರದರ್ಶನ ಮೆರವಣಿಗೆ ಗೂನಡ್ಕದಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಲುಗುಂಡಿ ಫಾತಿಮಾ ಶರೀಯತ್ ಕಾಲೇಜ್ ಅಧ್ಯಕ್ಷರಾದ ಆಲಿ ಹಾಜಿ ನೆರವೇರಿಸಿದರು. ಅಧ್ಯಕ್ಷತೆಯನ್ನು ದಫ್ ಅಸೋಸಿಯೇಷನ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ವಹಿಸಿದ್ದರು. ಮದ್ರಸ ಮೆನೇಜ್ಮೆಂಟ್

ಅಧ್ಯಕ್ಷರಾದ ತಾಜ್ ಮಹಮ್ಮದ್, ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಖಾದರ್ ಬಾಯಂಬಾಡಿ, ಜಮಾಲ್ ಬೆಳ್ಳಾರೆ, ಬಶೀರ್ ಬೆಳ್ಳಾರೆ, ಜಮಾಲ್ ಕಳಂಜ, ರಾಯಲ್ ಫ್ರೆಂಡ್ಸ್ ಅಧ್ಯಕ್ಷರಾದ ಸಾಜೀದ್, ಜಮಾಯತ್ ಉಪಾಧ್ಯಕ್ಷರಾದ ಹನೀಫ್ ಟಿ. ಬಿ. ದಫ್ ಅಸೋಸಿಯೇಷನ್ ಕಾರ್ಯದರ್ಶಿ ಅಬ್ದುಲ್ ಖಾದರ್,. ಸುಳ್ಯ ರೇಂಜ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಉಸ್ತಾದ್, ನೂರುದ್ದಿನ್ ಅನ್ಸಾರಿ, ಝಕರಿಯ ದಾರಿಮಿ, ಹಸೈನಾರ್ ಮುಸ್ಲಿಯಾರ್, ಪತ್ತಾಹ್ ಕಾಸಿಮಿ, ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆಕರ್ಷಕ. ಮೆರವಣಿಗೆಯ ಸಜ್ಜನ ಸಭಾ ಭವನದಿಂದ ಆರಂಭಗೊಂಡ ದಫ್ ಮೆರವಣಿಗೆ ಗೂನಡ್ಕ ಪೇಟೆಯಲ್ಲಿ ಸಾಗಿ ದರ್ಕಾಸ್ ರಸ್ತೆ ಬಳಿ ಸಮಾಪನಗೊಂಡಿತು.
ದಫ್ ಪ್ರದರ್ಶನದಲ್ಲಿ ಸಂಪಾಜೆ ತಂಡ ಪ್ರಥಮ, ಕಲ್ಲುಗುಂಡಿ ದ್ವಿತೀಯ ಸ್ಥಾನ ಪಡೆಯಿತು.














