ಪೇರಡ್ಕ:ಪೇರಡ್ಕ ಮುಹಿಯುದ್ದೀನ್ ರಿಪಾಯಿ ದಫ್ ಅಸೋಸಿಯೇಷನ್ ನೇತೃತ್ವದಲ್ಲಿ ದಫ್ ಸ್ಪರ್ಧೆ ಪೇರಡ್ಕ ಮಸೀದಿ ವಠಾರದಲ್ಲಿ ನಡೆಯಿತು.ವಿಜೇತರಿಗೆ ನೀಡುವ ಟ್ರೋಫಿಯನ್ನು
ಕರ್ನಾಟಕ ಸರ್ಕಾರದ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಾಹಿದ್ ತೆಕ್ಕಿಲ್ ಅನಾವರಣಗೊಳಿಸಿ ಶುಭ ಹಾರೈಸಿದರು.ದಫ್ ಅಸೋಸಿಯೇಷನ್ ವತಿಯಿಂದ
ಟಿ.ಎಂ.ಶಾಹಿದ್ ತೆಕ್ಕಿಲ್ ಅವರನ್ನು ಖತೀಬ್ ಉಸ್ತಾದ್ ನಹೀಂ ಫೈಝಿ ಉಸ್ತಾದ್ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಬುಸಾಲಿ ಪಿ. ಕೆ,ಉದ್ಯಮಿ ಲತೀಫ್ ಹರ್ಲಡ್ಕ, ಅರಂತೋಡು ಜುಮಾ ಮಸೀದಿ ಅಧ್ಯಕ್ಷ ಹಾಜಿ ಅಶ್ರಫ್ ಗುಂಡಿ ಮುಹಿಯುದ್ದೀನ್ ರಿಪಾಯಿ ದಫ್ ಅಸೋಸಿಯೇಷನ್ ಅಧ್ಯಕ್ಷಜಿ ಕೆ ಹಮೀದ್ ಗೂನಡ್ಕ, ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ನಗರ ಪಂಚಾಯತ್ ಮಾಜಿ ಸದಸ್ಯ ಸಿದ್ದೀಕ್ ಕೊಕ್ಕೋ, ಮುನೀರ್ ದಾರಿಮಿ, ಹಾಜಿ ಇಬ್ರಾಹಿಂ ಕರಾವಳಿ, ಹ್ಯಾರೀಸ್ ಮುಸ್ಲಿಯಾರ್, ಶಾಕಿರ್ ಉಸ್ತಾದ್, ಅಬ್ದುಲ್ ಕಲಾಂ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.





