ಸುಳ್ಯ: ನಿಧನರಾದ ಕೆಪಿಸಿಸಿ ಕಾರ್ಯಧ್ಯಕ್ಷರಾಗಿದ್ದ ಆರ್ ಧ್ರುವನಾರಾಯಣ ಅವರಿಗೆ ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶೃದ್ಧಾಂಜಲಿ ಸಭೆ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಹೆಚ್ ಎಂ ನಂದಕುಮಾರ್ ನುಡಿನಮನ ಸಲ್ಲಿಸಿ’ಕಾಂಗ್ರೆಸ್ ಪಕ್ಷವೇ ತನ್ನ ಉಸಿರು ಎಂದು ಪ್ರತಿಪಾದಿಸಿ ಪಕ್ಷಕ್ಕಾಗಿ,ಪಕ್ಷ ಸಂಘಟನೆಗಾಗಿ ಹಗಲಿರುಳು ತನ್ನ
ಪ್ರಾಮಾಣಿಕ ನಾಯಕತ್ವದ ಮೇಲೆ ಕಾರ್ಯಾಚರಿಸಿದ ಕಾಂಗ್ರೆಸ್ ಪಕ್ಷದ ಒಬ್ಬ ಶಿಸ್ತಿನ ಸಿಪಾಯಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್ ಧ್ರುವನಾರಾಯಣ್ ಅವರು ಒಬ್ಬ ಉತ್ತಮ ಸಂಸದೀಯ ಪಟುವಾಗಿ ಅತೀ ಹೆಚ್ಚು ಪ್ರಶ್ನೆ ಕೇಳಿರುವ ಉದಾಹರಣೆ ಇದೆ. ಅವರ ಅಕಾಲಿಕ ಮರಣ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದ್ದು ಅವರು ಒಬ್ಬ ವ್ಯಕ್ತಿ ಅಲ್ಲ ಅವರೊಬ್ಬ ಪಕ್ಷದ ಶಕ್ತಿಯಾಗಿದ್ದರು ಎಂದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಎಂ ವೆಂಕಪ್ಪ ಗೌಡ,
ಕೆಪಿಸಿಸಿ ವಕ್ತಾರ ಟಿ.ಎಂ. ಶಹೀದ್ ತೆಕ್ಕಿಲ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ ಜಯರಾಮ ನುಡಿನಮನ ಸಲ್ಲಿಸಿದರು.
ಸಭೆಯಲ್ಲಿ ನಗರ ಪಂಚಾಯತ್ ಮಾಝ ಅಧ್ಯಕ್ಷ ಎಸ್. ಸಂಶುದ್ದಿನ್,ಪ್ರಮುಖರಾದ ಶಾಫಿ ಕುತ್ತಮೊಟ್ಟೆ, ಶಶಿಧರ್ ಎಂ ಜೆ, ಭವಾನಿಶಂಕರ್ ಕಲ್ಮಡ್ಕ, ನಂದರಾಜ್ ಸಂಕೇಶ್, ಕೃಷ್ಣಸ್ವಾಮಿ ಕಂಡಡ್ಕ, ಸುರೇಶ್ ಕಾಮತ್,ಕೀರ್ತನ್ ಕೊಡಪಾಲ, ಗಂಗಾಧರ ಮೇನಾಲ ಉಪಸ್ಥಿತರಿದ್ದರು. ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪಿ.ಎಸ್ ಗಂಗಾಧರ ಸ್ವಾಗತಿಸಿ, ಮಾಜಿ ಪ್ರಧಾನ ಕಾರ್ಯದರ್ಶಿ ಗೋಕುಲ್ ದಾಸ್ ವಂದಿಸಿದರು.