ಸುಳ್ಯ:ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ, ಮಾಜಿ ಸಂಸದ ಆರ್. ಧ್ರುವನಾರಾಯಣ ಅವರ ನಿಧನಕ್ಕೆ ಕೆಪಿಸಿಸಿ ಸಂಯೋಜಕರು ಹಾಗು ಸುಳ್ಯ ಬ್ಲಾಕ್ ಉಸ್ತುವಾರಿ ಜಿ.ಕೃಷ್ಣಪ್ಪ ಹಾಗು ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಸಂತಾಪ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು
ಯಶಸ್ವಿಯಾಗಿ ನಿರ್ವಹಿಸಿ ಎರಡು ಬಾರಿ ಚಾಮರಾಜ ನಗರ ಕ್ಷೇತ್ರದ ಸಂಸದರಾಗಿ, ಶಾಸಕರಾಗಿ ಮತ್ತು ಕೆ.ಪಿ.ಸಿ.ಸಿಯ ಕಾರ್ಯದ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅವರ ಅಗಲಿಕೆಯು ಅತ್ಯಂತ ದುಃಖ ತಂದಿದೆ. ಜನಪರ ಹಾಗು ಅಭಿವೃದ್ಧಿ ಪರ ಜನ ನಾಯಕರಾಗಿದ್ದ ಅವರ ಅಕಾಲಿಕ ನಿಧನವು ಕಾಂಗ್ರೆಸ್ ಪಕ್ಷಕ್ಕೆ ಅಘಾತವನ್ನುಂಟು ಮಾಡಿದೆ ಮತ್ತು ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.