ಕಡಬ:ಕರ್ನಾಟಕ ಸಲಫಿ ಅಸೋಸಿಯೇಷನ್ ಸುಳ್ಯ ಮತ್ತು ಬೆಳ್ಳಾರೆ ಘಟಕದ ವತಿಯಿಂದ ಡ್ರಗ್ಸ್ ಮುಕ್ತರಾಗೋಣ, ಸೃಷ್ಟಿಕರ್ತನಿಗೆ ವಿಧೇಯರಾಗೋಣ ಎಂಬ ಧ್ಯೇಯವಾಕ್ಯದಡಿ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವು ಇಂದು (ನ.24 ಶುಕ್ರವಾರ) ಕಡಬದ ಅನುಗ್ರಹ ಸಭಾಭವನದ ವಠಾರದಲ್ಲಿ ನಡೆಯಲಿದೆ. ಡ್ರಗ್ಸ್ ಮುಕ್ತ ಅಭಿಯಾನದ ಅಂಗವಾಗಿ ಇಂದು ಸಂಜೆ 5 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಮುಖರು ಭಾಗವಹಿಸಿ ಪ್ರಭಾಷಣ ನೀಡಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.







