ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ‘ಕಮಿಟಿ ಬಿ’ ಇದರ ಅಧ್ಯಕ್ಷ ಡಾ.ಕೆ.ವಿ.ರೇಣುಕಾ ಪ್ರಸಾದ್ ಅವರು ಭೇಟಿ ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಹಾಗೂ

ಅರ್ಚಕರಾದ ರಾಮಚಂದ್ರ ಭಟ್ ಅವರು ಪ್ರಸಾದ ನೀಡಿ ಸ್ವಾಗತಿಸಿದರು. ಡಾ.ದೇವಿಪ್ರಸಾಸ್ ಕಾನತ್ತೂರು ಅವರು ಡಾ.ರೇಣುಕಾ ಪ್ರಸಾದ್ ಅವರನ್ನು ಶಾಲು ಹೊದಿಸಿ ಗೌರವಿಸಿದರು. ಆರಾಧನಾ ಸಮಿತಿಯ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ, ಅಧ್ಯಕ್ಷ ಸವಿತಾರ ಮುಡೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗುರುಪ್ರಸಾದ್ ತೋಟ, ಸಂಚಾಲಕ ಕುಸುಮಾಧರ ಕೆರೆಯಡ್ಕ, ಮಾಜಿ ಅಧ್ಯಕ್ಷ ಸಂತೋಷ್ ಜಾಕೆ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಧರ್ಮಣ್ಣ ನಾಯ್ಕ ಗರಡಿ, ತೀರ್ಥಾನಂದ ಕೊಡೆಂಕಿರಿ, ಜಯರಾಮ ಕಲ್ಲಾಜೆ, ತೀರ್ಥಪ್ರಸಾದ್ ಪಲ್ಲತ್ತಡ್ಕ, ಮತ್ತಿತರರು ಉಪಸ್ಥಿತರಿದ್ದರು.












