ಸುಳ್ಯ:ಇಂದು ಸುಳ್ಯಕ್ಕೆ ಆಗಮಿಸಿದ ಡಾ.ರೇಣುಕಾಪ್ರಸಾದ್ ಕೆ.ವಿ.ಅವರಿಗೆ ಅವರ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿಗಳು ಹಾಗೂ ಹಿತೈಷಿಗಳು ಸ್ವಾಗತ ನೀಡಿದರು.ಇಂದು ಸಂಜೆ ಸುಳ್ಯಕ್ಕೆ ಅಗಮಿಸಿದ ಡಾ.ರೇಣುಕಾಪ್ರಸಾದ್ ಅವರು ಕೆ.ವಿ.ಜಿ.ಕ್ಯಾಂಪಸ್ ಜಂಕ್ಷನ್ಗೆ

ಬರುತಿದ್ದಂತೆ ಅವರ ವಿದ್ಯಾಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್ ಯು.ಜೆ, ಪ್ರಮುಖರಾದ ಎನ್.ಎ.ರಾಮಚಂದ್ರ, ಸಂತೋಷ್ ಕುತ್ತಮೊಟ್ಟೆ, ದೊಡ್ಡಣ್ಣ ಬರೆಮೇಲು, ಪಿ.ಎ.ಮಹಮ್ಮದ್, ಸುರೇಶ್ ಎಂ.ಹೆಚ್, , ಪಿ.ಎಸ್.ಗಂಗಾಧರ್,ಜಾಕೆ ಮಾಧವ ಗೌಡ,ವೆಂಕಟ್ ದಂಬೆಕೋಡಿ, ಸಂತೋಷ್ ಜಾಕೆ, ಸುನಿಲ್ ಕೇರ್ಪಳ, ದಿನೇಶ್ ಮಡ್ತಿಲ, ರಿಯಾಜ್ ಕಟ್ಟೆಕಾರ್, ಶಾಫಿ ಕುತ್ತಮೊಟ್ಟೆ, ಕೆ.ಗೋಕುಲ್ದಾಸ್, ಸಹಿತ ಹಲವರು ಸೇರಿ ಸ್ವಾಗತಿಸಿದರು. ಡಾ.ಜ್ಯೋತಿ ಆರ್.ಪ್ರಸಾದ್, ಡಾ.ಅಭಿಜ್ಞಾ, ಬಿ.ಟಿ.ಮಾಧವ, ಪ್ರಸನ್ನ ಕಲ್ಲಾಜೆ, ಭವಾನಿಶಂಕರ ಅಡ್ತಲೆ, ಕಮಲಾಕ್ಷ ನಂಗಾರು ಮತ್ತಿತರರು ಇದ್ದರು.
ಬಳಿಕ ಕೆ.ವಿ.ಜಿ. ಯವರ ಪುತ್ಥಳಿಗೆ ಹಾರಾರ್ಪಣೆ ಗೈದ ಡಾ.ರೇಣುಕಾಪ್ರಸಾದ್ ರವರು ಗೌರವ ಸಲ್ಲಿಸಿ, ಆಶೀರ್ವಾದ ಪಡೆದರು. ಬಳಿಕ ಅವರ ಶಿಕ್ಷಣ ಸಂಸ್ಥೆಗಳ ಆಡಳಿತ ಕಚೇರಿಗೆ ಆಗಮಿಸಿದರು.









