ಸುಳ್ಯ: ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಇದರ ದಂತ ವೈದ್ಯಕೀಯ ವಿಭಾಗದ ನಾಮ ನಿರ್ದೇಶಕ ಸದಸ್ಯರಾಗಿ ಕೆ.ವಿ.ಜಿ. ದಂತಮಹಾವಿದ್ಯಾಲಯದ ಓರ್ಥೋಡೋಂಟಿಕ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ: ರೇವಂತ್ ಸೂಂತೋಡು ಅವರನ್ನು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ
ಉಪಕುಲಪತಿಗಳು ನೇಮಕ ಮಾಡಿ ಆದೇಶಿಸಿರುತ್ತಾರೆ.
ಇವರು ಕೆ.ವಿ.ಜಿ ದಂತಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು 2016 ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸುಳ್ಯ ತಾಲೂಕು ಉಬರಡ್ಕ ಗ್ರಾಮದ ಸೂರಯ್ಯ ಸೂಂತೋಡು ಮತ್ತು ನಳಿನಿ ದಂಪತಿಗಳ ಪುತ್ರ.
ಇವರ ಆಯ್ಕೆಗೆ ಕೆವಿಜಿ ದಂತಮಹಾವಿದ್ಯಾಲಯದ ಗವರ್ನಿಂಗ್ ಕೌನ್ಸಿಲ್ ಅಧ್ಯಕ್ಷರಾದ ಡಾ: ರೇಣುಕಾಪ್ರಸಾದ್ ಕೆ.ವಿ., ಸದಸ್ಯರಾದ ಡಾ: ಜ್ಯೋತಿ ಆರ್. ಪ್ರಸಾದ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ: ಉಜ್ವಲ್ ಯು.ಜೆ., ಪ್ರಾಂಶುಪಾಲರಾದ ಡಾ: ಮೋಕ್ಷಾನಾಯಕ್ ಹಾಗೂ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಡಾ: ಮನೋಜ್ ಕುಮಾರ್ ಅಡ್ಡಂತಡ್ಕ ಅಭಿನಂದಿಸಿರುತ್ತಾರೆ.