ವಿರಾಜಪೇಟೆ:ವಿರಾಜಪೇಟೆ ಗೌಡ ಸಮಾಜದ ವತಿಯಿಂದ ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ನ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ ಹಾಗೂ ಎಒಎಲ್ಇ ಕಮಿಟಿ ಬಿ ಇದರ ಅಧ್ಯಕ್ಷರಾದ ಡಾ.ಕೆ.ವಿ.ರೇಣುಕಾಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ವಿರಾಜಪೇಟೆ ಗೌಡ ಸಮಾಜದ ಸಭಾಭವನದ ಭೂಮಿಯನ್ನು
ಗೌಡ ಸಮಾಜದ ಹೆಸರಿಗೆ ನೀಡಿರುವ ಹಿನ್ನಲೆಯಲ್ಲಿ ಕುರುಂಜಿ ಸಹೋದರರನ್ನು ಗೌಡ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಸ್ಥಾಪಕಾಧ್ಯಕ್ಷರಾಗಿದ್ದ ಡಾ.ಕುರುಂಜಿ ವೆಂಕಟ್ರಮಣ ಗೌಡರು ಜಾಗ ಮತ್ತು ಕಟ್ಟಡವೊಂದನ್ನು ಖರೀಸಿಕೊಟ್ಟಿದ್ದರು. ಆದರೆ ಆ ಜಾಗದ ದಾಖಲೆ ಪತ್ರ

ವಿರಾಜಪೇಟೆ ಗೌಡ ಸಮಾಜದ ಹೆಸರಿಗೆ ಆಗಿರಲಿಲ್ಲ. ಜಾಗ ಡಾ.ಚಿದಾನಂದ ಹಾಗೂ ಡಾ.ರೇಣುಕಾಪ್ರಸಾದ್ ಅವರ ಹೆಸರಲ್ಲಿತ್ತು. ಇತ್ತೀಚೆಗೆ ಅಲ್ಲಿಯ ಸಮಾಜದವರ ವಿನಂತಿಯ ಮೇರೆಗೆ ಡಾ.ಚಿದಾನಂದರು ಮತ್ತು ಡಾ.ರೇಣುಕಾಪ್ರಸಾದರು ತಮ್ಮ ಪುತ್ರರಾದ ಅಕ್ಷಯ್ ಕೆ.ಸಿ. ಹಾಗೂ ಮೌರ್ಯ ಆರ್ ಪ್ರಸಾದ್ ಅವರ ಮೂಲಕ ಈ ಜಾಗವನ್ನು ವಿರಾಜಪೇಟೆ ಗೌಡ ಸಮಾಜದ ಹೆಸರಿಗೆ ದಾಖಲೆ ಮಾಡಿ ನೀಡಿದ್ದರು. ಈ ಹಿನ್ನಲೆಯಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಗಣ್ಯರ ಸಮ್ಮುಖದಲ್ಲಿ ಸಹೋದರರನ್ನು ಸನ್ಮಾನಿಸಲಾಯಿತು.





