ಪಂಜ: ಕಳೆದ 13 ವರ್ಷಗಳಿಂದ ಪಂಜ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಡಾ.ಸಿ.ಮಂಜುನಾಥ್ ಅವರಿಗೆ ಗೌರವಾರ್ಪಣೆ ಹಾಗೂ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆ.10ರಂದು ನಡೆಯಿತು. ಪಂಜ ಪರಿಸರದ ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ
ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಗೌರವಾರ್ಪಣೆ ನೆರವೇರಿಸಿದರು.ಸಾರ್ವಜನಿಕ ಆರಾಧನಾ ಸಮಿತಿಯ ಪಂಜ ವಲಯ ಅಧ್ಯಕ್ಷ ಸವಿತಾರ ಮುಡೂರು ಅಭಿನಂದನಾ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಜಳಕದಹೊಳೆ, ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗೌರವ ಸಲಹೆಗಾರರಾದ ಆನಂದ ಗೌಡ ಕಂಬಳ, ಶ್ರೀ ಪೈಂದೋಡಿ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ನಿಡ್ವಾಳ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಚಂದ್ರಪ್ರಕಾಶ್ ಕಂಬಳ, ಪಂಜ ಗರಡಿಬೈಲು ಶ್ರೀ ಕಾಚುಕುಜುಂಬ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪರಮೇಶ್ವರ ಗೌಡ ಬಿಳಿಮಲೆ, ಪಂಜ ಜಿಂಗಾಣಿಗುಡ್ಡೆ ಅಳ್ಪೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನದ ಅಧ್ಯಕ್ಷ ಕುಸುಮಾಧರ ಕರಿಮಜಲು, ಪಂಜ ವನಿತಾ ಸಮಾಜದ ಅಧ್ಯಕ್ಷೆ ಸುಮಾ ಕುದ್ವ, ಅರಣ್ಯ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೊಳ್ಳಾಜೆ, ಶ್ರೀ ಶಾರದಾಂಬ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಪಂಚಶೀ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹಿತೇಶ್ ಪಂಜದಬೈಲು, ಜೆಸಿಐ ಪಂಜ ಪಂಚಶ್ರೀ ಅಧ್ಯಕ್ಷ ವಾಚಣ್ಣ ಕೆರೆಮೂಲೆ, ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ಯುವ ತೇಜಸ್ನ ಕಾರ್ಯನಿರ್ವಾಹಕ ಸಂಯೋಜಕ ಗುರುಪ್ರಸಾದ್ ಪಂಜ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ ಸಂಪ್ಯಾಡಿ, ಗ್ರಾಮ ಸ್ವರಾಜ್ ಪಂಜ ಸಂಚಾಲಕ ಜಿನ್ನಪ್ಪ ಗೌಡ ಅಲ್ಪೆ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ

ಅಧ್ಯಕ್ಷ ಗುರುಪ್ರಸಾದ್ ತೋಟ, ಮಹಾತ್ಮ ಗಾಂಧಿ ವಿದ್ಯಾಪೀಠದ ಸಂಚಾಲಕ ಪುರುಷೋತ್ತಮ ಮುಡೂರು, ಕೇನ್ಯ ಸ್ನೇಹಿತೆಯರ ಕೂಟದ ಅಧ್ಯಕ್ಷೆ ಶ್ಯಾಮಲಾ ರೈ ನೇರ್ಪು, ಪಂಬೆತ್ತಾಡಿ ಅಮೃತ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತ ಬಾಬ್ಲಬೆಟ್ಟು, ಪಂಬೆತ್ತಾಡಿ ಅಕ್ಷತಾ ಯುವತಿಮಂಡಲದ ಅಧ್ಯಕ್ಷೆ ಧನಲಕ್ಷ್ಮಿ ಮಠ ಭಾಗವಹಿಸಿದ್ದರು. ಸಂಘಟಕರಾದ ಪಂಜ
ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿತ್ರಕಲಾ ಬೊಳ್ಳಾಜೆ ಪ್ರಾರ್ಥಿಸಿದರು. ಧರ್ಮಣ್ಣ ನಾಯ್ಕ ಗರಡಿ ಸನ್ಮಾನ ಪತ್ರ ವಾಚಿಸಿದರು. ಪ್ರೀತಿ ರೈ ನಿರೂಪಿಸಿದರು.
ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಡಾ.ಮಂಜುನಾಥ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.





