ಮಂಗಳೂರು:ದಕ್ಷಿಣ ಕನ್ನಡಬಜಿಲ್ಲಾ ಪಂಚಾಯತ್ನ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಡಾ. ಆನಂದ್ ಕೆ ನೇಮಕಗೊಂಡಿದ್ದಾರೆ.ಅವರು ನಗರದ ಜಿಲ್ಲಾ ಪಂಚಾಯತ್ ನ ಸಿಇಒ ಕಚೇರಿಯಲ್ಲಿ ಜೂ.29ರಂದು ಅಧಿಕಾರ ಸ್ವೀಕರಿಸಿದರು.ಇದೂವರೆಗೂ
ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ನೂತನ ಸಿಇಒ ಅವರಿಗೆ ಅಧಿಕಾರ ಹಸ್ತಾಂತರಿಸಿ, ಶುಭಹಾರೈಸಿದರು. ದ.ಕ.ಜಿ.ಪಂ. ಸಿಇಒ ಆಗಿದ್ದ ಡಾ.ಕುಮಾರ್ ಅವರು ಮಂಡ್ಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾದ ಹಿನ್ನಲೆಯಲ್ಲಿ ಡಾ.ಆನಂದ್ ಅವರು ಸಿಇಒ ಆಗಿ ನೇಮಕಗೊಂಡಿದ್ದಾರೆ.