ಮಂಗಳೂರು: 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೀಡಲಾಗುವ 2022ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಸೇರಿ 20 ಸಂಘಟನೆಗಳಿಗೆ ಹಾಗು ಸುಳ್ಯದ ಕಲಾವಿದ ಎಂ.ಜಿ.ಮಂಜುನಾಥ್ ಬಂಗ್ಲೆಗುಡ್ಡೆ ಸೇರಿ 34 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದೆ. ಪತ್ರಕರ್ತರ
ಗ್ರಾಮ ವಾಸ್ತವ್ಯ, ಬ್ರ್ಯಾಂಡ್ ಮಂಗಳೂರು ಅಭಿಯಾನ, ಪ್ಲಾಸ್ಟಿಕ್ ಜಾಗೃತಿ ಅಭಿಯಾನ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿಯೇ ಗುರುತಿಸಿ ಕೊಂಡಿರುವ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಪ್ರಶಸ್ತಿ ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ..



ಯದುಪತಿ ಗೌಡ ಪುದುವೆಟ್ಟು (ಸಾಹಿತ್ಯ), ಶೇಖರ ಗೌಡ ಬಜ್ಪೆ (ಸಾಹಿತ್ಯ), ಉತ್ತಮ್ ಕುಮಾರ್ ಜೆ. ಕೋಡಿಯಾಲ್‌ಬೈಲ್ (ಹಿಂದೂಸ್ತಾನಿ ಸಂಗೀತ), ಅಚ್ಯುತ ಮಾರ್ನಾಡು ಬೆಳುವಾಯಿ (ಯಕ್ಷಗಾನ), ಬಂಟ್ವಾಳ ಜಯರಾಮ ಆಚಾರ್ಯ (ಯಕ್ಷಗಾನ), ಕೆ. ನಾರಾಯಣ ಪೂಜಾರಿ ಉಜಿರೆ (ಯಕ್ಷಗಾನ), ಕೇಶವ ಶಕ್ತಿನಗರ (ಕಲೆ), ಮಂಜುನಾಥ ಎಂ.ಜಿ. ಸುಳ್ಯ (ಕಲೆ), ದೇಜಪ್ಪ ಪೂಜಾರಿ ಎನ್. ವಿಟ್ಲ (ಕಲೆ), ಪೂಜಾ ಯು. ಕಾಂಚನ್ ಕುಳಾಯಿ (ನಾಟಕ), ಪದ್ಮ ಮಲೆಕುಡಿಯ ಮಲವಂತಿಗೆ (ಕರಕುಶಲ ಕಲೆ), ಕೃಷ್ಣ ಪ್ರಸಾದ್ ದೇವಾಡಿಗ ಉಪ್ಪಿನಂಗಡಿ (ಸಂಗೀತ), ಚಂದ್ರಶೇಖರ ಕೆ. ಮಂಕಿಸ್ಟ್ಯಾಂಡ್ (ಸಂಗೀತ), ಗುರುಪ್ರಿಯ ನಾಯಕ್ ಎಸ್. ನರಿಮೊಗರು (ಸಂಗೀತ), ಪ್ರತಿಮಾ ಶ್ರೀಧರ ಹೊಳ್ಳ ಕೊಟ್ಟಾರ (ಭರತನಾಟ್ಯ), ಪಿ.ಕೃಷ್ಣಪ್ಪ ಬೋಂದೆಲ್ (ಪರಿಸರ), ಶಶಿಧರ ಪೊಯ್ಯತ್ತಬೈಲ್ ಕೋಟೆಕಾರ್ (ಪತ್ರಿಕೋದ್ಯಮ), ವೆಂಕಟೇಶ್ ಬಂಟ್ವಾಳ (ಪತ್ರಿಕೋದ್ಯಮ), ಕೆ. ವಿಲ್ಫ್ರೆಡ್ ಡಿಸೋಜ ಪೆರುವಾಯಿ (ಪತ್ರಿಕೋದ್ಯಮ), ಡಾ. ಹಬೀಬ್ ರಹ್ಮಾನ್ ಮಂಗಳೂರು (ವೈದ್ಯಕೀಯ), ಡಾ. ಭಾಸ್ಕರ ರಾವ್ ಬಂಟ್ವಾಳ (ವೈದ್ಯಕೀಯ), ಡಾ.ಸುಧಾಕರ ಶೆಟ್ಟಿ ಪುಣೆ (ವೈದ್ಯಕೀಯ), ಗಣೇಶ್ ಪಂಡಿತ್ ಉಳ್ಳಾಲ (ನಾಟಿ ವೈದ್ಯ), ವೆಂಕಪ್ಪ ನಲಿಕೆ ಅಲ್ಲಿಪಾದೆ (ದೈವಾರಾಧನೆ), ಸೇಸಪ್ಪ ಬಂಗೇರಾ ಮೊಂಟೆಪದವು (ದೈವಾರಾಧನೆ), ಹೊನ್ನಯ ಕುಲಾಲ್ ಬೆಳ್ತಂಗಡಿ (ಸಮಾಜ ಸೇವೆ), ಯೋಗೀಶ್ ಶೆಟ್ಟಿ ಕೋಟೆಕಾರು (ಸಮಾಜ ಸೇವೆ), ಜಯರಾಮ ರೈ ಕೆದಂಬಾಡಿ (ಸಮಾಜ ಸೇವೆ), ಕೆ. ವಿನಯಾನಂದ ಜೋಗಿ ಶಕ್ತಿನಗರ (ಸಮಾಜ ಸೇವೆ), ಸಿ.ಎ.ಶಾಂತರಾಮ ಶೆಟ್ಟಿ ಬಿಜೈ (ಸಮಾಜ ಸೇವೆ), ಸೇಸಪ್ಪ ಕೋಟ್ಯಾನ್ ಕಲ್ಲೇಗ (ಸಮಾಜ ಸೇವೆ), ಗಂಗಾಧರ ಶೆಟ್ಟಿ ಹೊಸಮನೆ ನೆಲ್ಯಾಡಿ (ಸಮಾಜ ಸೇವೆ), ರಾಜೇಶ್ ಕದ್ರಿ ಶಕ್ತಿನಗರ (ಸಮಾಜ ಸೇವೆ/ಶಿಕ್ಷಣ), ನಲಿಕೆ ಕೂಕ್ರ ಸಾಲ್ಯಾನ್ ಮಾರೂರು (ಭೂತಾರಾಧನೆ) ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘ (ಸಾಹಿತ್ಯ), ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ಛಾಯಾಚಿತ್ರ), ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ಪತ್ರಿಕೋದ್ಯಮ), ಸಪ್ತಸ್ವರ ಕಲಾತಂಡ ಕೊಣಾಜೆ (ಸಮಾಜ ಸೇವೆ) ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ (ಸಮಾಜ ಸೇವೆ), ಉತ್ಸಾಹಿ ಯುವಕ ವೃಂದ ಪದವು ಬಿಕರ್ನಕಟ್ಟೆ (ಸಮಾಜ ಸೇವೆ), ಕರ್ನಾಟಕ ಶಿವಸೇವಾ ಸಮಿತಿ ಪಾಂಡೇಶ್ವರ (ಸಮಾಜ ಸೇವೆ), ಕುದ್ರೋಳಿ ಯುವ ಸಂಘ (ಸಮಾಜ ಸೇವೆ), ನೇತಾಜಿ ಯುವಕ ಸಂಘ ದೇರಾಜೆ (ಸಮಾಜ ಸೇವೆ), ಬ್ಲಡ್ ಡೋನರ್ಸ್ ಮಂಗಳೂರು ದೇರಳಕಟ್ಟೆ (ಸಮಾಜ ಸೇವೆ), ಭಾರತ್ ಫ್ರೆಂಡ್ಸ್ ಕ್ಲಬ್ ಇರಾ (ಸಮಾಜ ಸೇವೆ), ಯೂತ್ ಸೆಂಟರ್ ಪಡೀಲ್ (ಸಮಾಜ ಸೇವೆ), ವಿಜಯ ಯುವ ಸಂಗಮ ಎಕ್ಕಾರು (ಸಮಾಜ ಸೇವೆ), ವಿವೇಕಾನಂದ ಯುವಕ ಮಂಡಲ ಚೇಳಾಯಾರು (ಸಮಾಜ ಸೇವೆ), ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಸುರತ್ಕಲ್ (ಸಮಾಜ ಸೇವೆ), ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್(ಸಮಾಜ ಸೇವೆ), ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ ಸಸಿಹಿತ್ಲು (ಸಮಾಜ ಸೇವೆ), ಶಾರದಾ ಫ್ರೆಂಡ್ಸ್ ಸರ್ಕಲ್ ಸಜಿಪ ಮುನ್ನೂರು (ಸಮಾಜ ಸೇವೆ), ಬದುಕು ಕಟ್ಟೋಣ ಬನ್ನಿ ತಂಡ ಬೆಳ್ತಂಗಡಿ (ಸಮಾಜ ಸೇವೆ), ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಹೊಸಬೆಟ್ಟು (ಕ್ರೀಡೆ) ಪ್ರಶಸ್ತಿ ವಿಜೇತ ಸಂಘಟನೆಗಳಾಗಿವೆ.