ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.ಜೂ.23ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ನಗರದ ಬಂದರಿನಲ್ಲಿ ಮಂಗಳೂರು ಕೆನರಾ ಛೇಂಬರ್ ಆಫ್ ಕಾಮರ್ಸ್ ಮತ್ತು ವಾಣಿಜ್ಯ ನಿಯೋಗಗಳೊಂದಿಗೆ ಭೇಟಿ ಮಾಡುವರು.
10.30ಕ್ಕೆ ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ
ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿವರು. ಮಧ್ಯಾಹ್ನ 3.30ಕ್ಕೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಆಂಟಿ ಡ್ರಗ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸುವರು.ಸಂಜೆ 4.45ಕ್ಕೆ ಬಂಟ್ವಾಳದಲ್ಲಿ ಕೇಂದ್ರದ ಮಾಜಿ ಸಚಿವರಾದ ಜನಾರ್ಧನ ಪೂಜಾರಿ ಅವರನ್ನು ಭೇಟಿ ಮಾಡುವರು.ಸಂಜೆ 5.30ಕ್ಕೆ ದೇರೆಬೈಲ್ನ ಬ್ಲೂಬೇರಿ ಹಿಲ್ಸ್ನಲ್ಲಿ ಪ್ರಸ್ತಾಪಿತ ಕಿನೋನಿಕ್ಸ್ ಐಟಿ ಪಾರ್ಕ್ ಭೇಟಿ ನೀಡಿ ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಸುವರು.
ರಾತ್ರಿ 7 ಗಂಟೆಗೆ ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆ ಕುರಿತಂತೆ ನಗರದ ಸಕ್ರ್ಯೂಟ್ ಹೌಸ್ನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ರಾತ್ರಿ 8 ಗಂಟೆಗೆ ನಗರದ ಸಕ್ರ್ಯೂಟ್ ಹೌಸ್ನಲ್ಲಿ ವೈದ್ಯರ ನಿಯೋಗ ಹಾಗೂ ಸಾರ್ವಜನಿಕರ ಭೇಟಿ ಮಾಡುವರು. ರಾತ್ರಿ ಸಕ್ರ್ಯೂಟ್ ಹೌಸ್ನಲ್ಲಿ ವಾಸ್ತವ್ಯ ಹೂಡಿ ಜೂ.24ರ ಶನಿವಾರ ಬೆಳಿಗ್ಗೆ 6.50ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ತಲುಪುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.