ಬೆಂಗಳೂರು: ಸರ್ಕಾರ ವಿವಿಧ ಜಿಲ್ಲೆಗಳ ಉಸ್ತುವಾರಿ ಸಚಿವರುಗಳನ್ನು ಶುಕ್ರವಾರ ನೇಮಕ ಮಾಡಿದೆ.
ಈ ಸಂಬಂಧ ಸರ್ಕಾರ ಪ್ರಕಟಣೆ ಹೊರಡಿಸಲಾಗಿದೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾಗಿ ದಿನೇಶ್ ಗುಂಡೂರಾವ್ ಅವರನ್ನು ನೇಮಕ ಮಾಡಲಾಗಿದೆ. ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳಕರ್, ಎಚ್.ಸಿ.ಭೋಸರಾಜು ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿದ್ದಾರೆ.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು
ಬೆಂಗಳೂರು ನಗರ ಜಿಲ್ಲೆಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರಿಗೆ ತುಮಕೂರು ಜಿಲ್ಲೆಯ ಹೊಣೆ ನೀಡಲಾಗಿದೆ.
ಯಾವ ಜಿಲ್ಲೆಗೆ ಯಾರು ಉಸ್ತುವಾರಿ
ಡಿ.ಕೆ.ಶಿವಕುಮಾರ್ – ಬೆಂಗಳೂರು ನಗರ
ಜಿ.ಪರಮೇಶ್ವರ್ – ತುಮಕೂರು
ಎಚ್.ಕೆ.ಪಾಟೀಲ – ಗದಗ
ಕೆ.ಎಚ್.ಮುನಿಯಪ್ಪ – ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ – ರಾಮನಗರ
ಕೆ.ಜೆ.ಜಾರ್ಜ್ – ಚಿಕ್ಕಮಗಳೂರು
ಎಂ.ಬಿ.ಪಾಟೀಲ – ವಿಜಯಪುರ
ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ
ಎಚ್.ಸಿ. ಮಹಾದೇವಪ್ಪ – ಮೈಸೂರು
ಸತೀಶ್ ಜಾರಕಿಹೊಳಿ – ಬೆಳಗಾವಿ
ಪ್ರಿಯಾಂಕ್ ಖರ್ಗೆ – ಕಲಬುರಗಿ
ಶಿವಾನಂದ ಪಾಟೀಲ – ಹಾವೇರಿ
ಬಿ.ಝಡ್. ಜಮೀರ್ ಅಹಮದ್ ಖಾನ್ – ವಿಜಯನಗರ
ಶರಣ ಬಸಪ್ಪ ದರ್ಶನಾಪುರ – ಯಾದಗಿರಿ
ಈಶ್ವರ್ ಖಂಡ್ರೆ – ಬೀದರ್
ಚಲುವರಾಯಸ್ವಾಮಿ – ಮಂಡ್ಯ
ಎಸ್.ಎಸ್.ಮಲ್ಲಿಕಾರ್ಜುನ – ದಾವಣಗೆರೆ
ಸಂತೋಷ್ ಲಾಡ್ – ಧಾರವಾಡ.
ಶರಣ ಪ್ರಕಾಶ್ ಪಾಟೀಲ – ರಾಯಚೂರು
ಆರ್.ಬಿ.ತಿಮ್ಮಾಪೂರ – ಬಾಗಲಕೋಟೆ
ಕೆ.ವೆಂಕಟೇಶ್ – ಚಾಮರಾಜನಗರ
ತಂಗಡಗಿ ಶಿವರಾಜ್ ಸಂಗಪ್ಪ – ಕೊಪ್ಪಳ
ಡಿ.ಸುಧಾಕರ್ – ಚಿತ್ರದುರ್ಗ
ಬಿ.ನಾಗೇಂದ್ರ – ಬಳ್ಳಾರಿ
ಕೆ.ಎನ್.ರಾಜಣ್ಣ – ಹಾಸನ
ಬಿ.ಎಸ್.ಸುರೇಶ್ – ಕೋಲಾರ
ಲಕ್ಷ್ಮೀ ಹೆಬ್ಬಾಳಕರ್ – ಉಡುಪಿ
ಮಂಕಾಳ್ ವೈದ್ಯ – ಉತ್ತರ ಕನ್ನಡ
ಮಧು ಬಂಗಾರಪ್ಪ – ಶಿವಮೊಗ್ಗ
ಎಂ.ಸಿ.ಸುಧಾಕರ್ – ಚಿಕ್ಕಬಳ್ಳಾಪುರ
ಎಚ್.ಸಿ.ಭೋಸರಾಜು – ಕೊಡಗು