ಸುಳ್ಯ:ದ.ಕ ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ನೇತೃತ್ವದಲ್ಲಿ ಜಿಲ್ಲಾ ವಾಲಿಬಾಲ್ ಚಾಂಪಿಯನ್ ಶಿಪ್ ಏಪ್ರಿಲ್ 11 ರಂದು ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ ನಡೆಯಲಿದೆ. ಇದರಲ್ಲಿ ಭಾಗವಹಿಸುವ ಸುಳ್ಯ ತಾಲೂಕಿನ ಪುರುಷ ಹಾಗೂ ಮಹಿಳಾ ತಂಡಗಳ ಆಯ್ಕೆ ಪ್ರಕ್ರಿಯೆಯು ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಶನ್ ನೇತೃತ್ವದಲ್ಲಿ
ಮುಂಗಾರು ವಾಲಿಬಾಲ್ ಆಕಾಡಮಿಯ ಸಹಕಾರದೊಂದಿಗೆ ಸುಳ್ಯದ ಗ್ರೀನ್ ವ್ಯೂ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು. ಆಯ್ಕೆ ಪ್ರಕ್ರಿಯೆಯನ್ನು ತರಬೇತುದಾರರಾದ ಮನೋಜ್ ಕುಮಾರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ವಾಲಿಬಾಲ್ ಅಸೋಸಿಯೇಟ್ ಸೆಕ್ರಟರಿ ಎನ್.ಜಯಪ್ರಕಾಶ್ ರೈ, ಸುಳ್ಯ ತಾಲೂಕು

ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರಮೇಲು, ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು, ಕೋಶಾಧಿಕಾರಿ ಕೆ.ಬಿ.ಇಬ್ರಾಹಿಂ,
ಸೂಡ ಅಧ್ಯಕ್ಷ ಕೆ.ಎಂ.ಮುಸ್ತಫ,ರಜ್ಜು ಬೈಯಾ, ಇರ್ಫಾನ್ ಜನತಾ, ರಿಯಾಝ್ ಕಟ್ಟೆಕ್ಕಾರ್, ಬಶೀರ್ ಸಪ್ನಾ, ಸುಧಾಕರ ನಾಗಪಟ್ಟಣ, ಎಸ್. ಸಂಶುದ್ದೀನ್,ಇಬ್ರಾಹಿಂ ಗೂನಡ್ಕ, ಪಿ.ಎ.ಮಹಮ್ಮದ್, ಇಸ್ಮಾಯಿಲ್ ಕುಂಬ್ಳೆಕ್ಕಾರ್, ಸುದರ್ಶನ್ ನಾವೂರು, ಸಿರಾಜ್, ಇಜ್ಜು ನಾವೂರು, ಅಝೀಝ್ ಸಂಗಂ ಮತ್ತಿತರರು ಭಾಗವಹಿಸಿದ್ದರು.









