ಮಂಗಳೂರು: ದ.ಕ ಜಿಲ್ಲಾ ಉಸ್ತುವಾರಿ ಸಚಿವರ ನೂತನ ಕಚೇರಿ ಮಂಗಳೂರಿನ ಪಡೀಲ್ನ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ನಡೆಯಿತು.ನೂತನ ಕಚೇರಿಯನ್ನು
ಸಚಿವರಾದ ದಿನೇಶ್ ಗುಂಡೂರಾವ್ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಂತರ ಅವರು ಮಾಜಿ ಸಚಿವರಾದ ರಮಾನಾಥ್ ರೈ, ಅಭಯ್ ಚಂದ್ರ ಜೈನ್ ಮತ್ತಿತ್ತರೊಡಗೂಡಿ ದೀಪ ಬೆಳಗಿಸಿದರು.ಈ ಸಂದರ್ಭ ಎಂಎಲ್ಸಿ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಆರ್ ಪದ್ಮರಾಜ್, ಇನಾಯತ್ ಅಲಿ, ಶಕುಂತಲಾ ಶೆಟ್ಟಿ ಮತ್ತಿತ್ತರ ಮುಖಂಡರು ಉಪಸ್ಥಿತರಿದ್ದರು.













