ಸಂಪಾಜೆ:ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ವಿಪತ್ತು ನಿರ್ವಹಣಾ ತಂಡದ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾ ಭವನದಲ್ಲಿ ನಡೆಯಿತು. ನೋಡೆಲ್ ಅಧಿಕಾರಿ ಹಾಗೂ ಸುಳ್ಯ ವಲಯ ಅರಣ್ಯ ಅಧಿಕಾರಿ ಮಂಜುನಾಥ್ ಅವರು ಪ್ರಾಕೃತಿಕ ವಿಕೋಪದ ಮುಂಜಾಗೃತೆ
ಹಾಗೂ ಪೂರ್ವ ತಯಾರಿ ಬಗ್ಗೆ ಮಾತನಾಡಿದರು. ಮೆಸ್ಕಾಂ ಇಲಾಖೆಯ ವತಿಯಿಂದ ಜೂನಿಯರ್ ಇಂಜಿನಿಯರ್ ಅಭಿಷೇಕ್ ಮಾತನಾಡಿದರು. ಇಲಾಖೆಯ ವತಿಯಿಂದ ಟ್ರೀ ಕಟ್ಟಿಂಗ್ , ಬಗ್ಗೆ ಅಪಾಯಕಾರಿ ಮರದ ಬಗ್ಗೆ, ವಿದ್ಯುತ್ ಲೈನ್ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ದರ್ಕಾಸ್ ಕೊಪ್ಪತಕಜೆ ಬಳಿ 8 ಮನೆಗೆ ರಸ್ತೆ ಸಮಸ್ಯೆ, ರಾಷ್ಟ್ರೀಯ ಹೆದ್ದಾರಿ ಚರಂಡಿ ಸ್ವಚ್ಛಗೊಳಿಸಿ ಹೂಳು ತೆರವು, ಕಲ್ಲುಗುಂಡಿ ಅರೋಗ್ಯ ಇಲಾಖೆಯ ಕಮ್ಯುನಿಟಿ ಹೆಲ್ತ್ ಆಫೀಸರ್ ರಜೆಯಲ್ಲಿದ್ದು ಬದಲಿ ವ್ಯವಸ್ಥೆ, ಸೇರಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಫಾರೆಸ್ಟ್ ಚಂದ್ರು, ಪೊಲೀಸ್ ಇಲಾಖೆಯ ನಾಗೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಸುಂದರಿ ಮುಂಡ ಡ್ಕ, ಸುಮತಿ ಶಕ್ತಿವೇಲು, ಅಬೂಸಾಲಿ ಪಿ. ಕೆ. ಹನೀಫ್ ಎಸ್. ಕೆ. ವಿಮಲಾ ಪ್ರಸಾದ್, ರಜನಿ ಶರತ್, ವಿಜಯಕುಮಾರ್, ಸಜ್ಜನ ಪ್ರತಿಷ್ಠಾನದ ರಹೀಂ ಬೀಜದ ಕಟ್ಟೆ, ಬಾಲಚಂದ್ರ ದರ್ಕಾಸ್, ಧರ್ಮಸ್ಥಳ ವಿಪತ್ತು ತಂಡದ ಚಿದಾನಂದ, ಭಾರತಿ, ಸವಿತಾ, ಪಂಚಾಯತ್ ಸಿಬ್ಬಂದಿ ಉಮೇಶ್, ಗುರುವಪ್ಪ, ಭೋಜಪ್ಪ, ಆಶಾ, ಅಂಗನವಾಡಿ, ಅರೋಗ್ಯ, ಕಮ್ಯುನಿಟಿ ಹೆಲ್ತ್ ಆಫೀಸರ್, ಅರೋಗ್ಯ ಸಹಾಯಕಿಯರು, ಊರ ನಾಗರಿಕರು, ಎಸ್. ಎಸ್. ಎಫ್ ವತಿಯಿಂದ ಸಿದ್ದಿಕ್ ಗ್ರಹ ರಕ್ಷಕ ದಳದ ಗಿರೀಶ್, ವಿನೋದ್ ಮೊದಲದವರು ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸರ್ವರನ್ನು ಸ್ವಾಗತಿಸಿದರು.