ಕೊಡಿಯಾಲ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂವಪ್ಪೆಯಲ್ಲಿ ಜರುಗಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಕೊಡಿಯಾಲ ಕಲ್ಪಡದ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್ ವತಿಯಿಂದ ಮೂವಪ್ಪೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ
ಎಪ್ಸನ್ ಕಂಪನಿಯ ಡಿಜಿಟಲ್ ವೈಫೈ ಪ್ರಿಂಟರ್ ಕೊಡುಗೆಯಾಗಿ ನೀಡಲಾಯಿತು. ಶಾಲಾ ಮುಖ್ಯ ಶಿಕ್ಷಕಿ ನಿರ್ಮಲ ಕೆ.ಎಂ ಹಾಗೂ ಸಹಶಿಕ್ಷಕಿ ಪುಷ್ಪಾ ಅವರಿಗೆ ನಮ್ಮೂರ ನಮ್ಮ ಕನಸು ಜನಸೇವಾ ಟ್ರಸ್ಟ್‌ನ ಅಧ್ಯಕ್ಷ ಸುಬ್ರಹ್ಮಣ್ಯ ಕೆ.ಎಂ , ಕಾರ್ಯದರ್ಶಿ ಹರ್ಷನ್ ಕೆ ಟಿ ಹಸ್ತಾಂತರಿಸಿದರು. ಪದಾಧಿಕಾರಿಗಳಾದ ಶಿವರಾಮ ಉಪಾಧ್ಯಾಯ, ದಿನೇಶ್ ಆಚಾರ್ಯ ಬಾಚೋಡಿ, ನಾಗರಾಜ್ ಕಣಿಲೆಗುಂಡಿ, ಲಕ್ಷ್ಮಣ ಕಣಿಲೆಗುಂಡಿ, ಮನೋಹರ , ಭಾಸ್ಕರ ತೋಟ, ರಮೇಶ್ ಕಲ್ಪಡ, ಗಣೇಶ್ ಪೆರ್ಲೋಡಿ, ರಾಜೇಶ್ ಅಂಗಾರಡ್ಕ ಹಾಗೂ ಚಂದ್ರಶೇಖರ ಕೊಡೆಂಕಿರಿ ಉಪಸ್ಥಿತರಿದ್ದರು.