ಬೆಂಗಳೂರು: ರಾಜ್ಯದಲ್ಲಿ ಡೀಸೆಲ್ ದರ ಪ್ರತಿ ಲೀಟರ್ಗೆ 2ರಷ್ಟು ಏರಿಕೆಯಾಗಿದೆ.ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 18.44ರಿಂದ ಶೇ 21.77ರಷ್ಟಕ್ಕೆ ಏರಿಕೆ ಮಾಡಿ, ಆದೇಶಿಸಿದೆ.ಹಾಲಿನ ಬೆಲೆ, ವಿದ್ಯುತ್ ದರ ಮತ್ತು ಕಸ ಸಂಗ್ರಹಣೆ ಶುಲ್ಕ ಹೆಚ್ಚಳದ ಬೆನ್ನಲ್ಲೇ, ಏಪ್ರಿಲ್ 1ರ
ರಾತ್ರಿಯಿಂದ ಅನ್ವಯವಾಗುವಂತೆ ಡೀಸೆಲ್ ದರ ಹೆಚ್ಚಿಸಿದೆ ಈಗಿರುವ ದರಕ್ಕೆ ಅನುಗುಣವಾಗಿ ಶೇಕಡಾ 3.33ರಷ್ಟು ಹೆಚ್ಚಳವಾಗಲಿದೆ.
‘2021ರ ನವೆಂಬರ್ 4ಕ್ಕೂ ಮುನ್ನ ರಾಜ್ಯದಲ್ಲಿ ಡೀಸೆಲ್ಗೆ ಶೇ 24ರಷ್ಟು ಮಾರಾಟ ತೆರಿಗೆ ವಿಧಿಸಲಾಗುತ್ತಿತ್ತು. ಆಗ ಪ್ರತಿ ಲೀಟರ್ ಡೀಸೆಲ್ನ ಬೆಲೆ 92.03ರಷ್ಟು ಇತ್ತು. 2024ರ ಜೂನ್ 1ರಂದು ಮಾರಾಟ ತೆರಿಗೆಯನ್ನು ಶೇ 18.44ಕ್ಕೆ ಇಳಿಸಲಾಗಿತ್ತು.