ಧರ್ಮಸ್ಥಳ: ಲಕ್ಷದೀಪೋತ್ಸವಕ್ಕೆ ಅಣಿಯಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಹಾಗು ಪರಿಸರ ದೀಪಾಲಂಕಾರದ ಶೋಭೆಯಲ್ಲಿ ಕಂಗೊಳಿಸಿ ಮನ ಸೆಳೆಯುತಿದೆ.ಲಕ್ಷ ದೀಪೋತ್ಸವ ಕಾರ್ಯಕ್ರಮ ನ.15ರಿಂದ 19ರ ತನಕ ನಡೆಯಲಿದ್ದು ಸರ್ವಧರ್ಮ ಸಮ್ಮೇಳನ, ಸಾಹಿತ್ಯ ಸಮ್ಮೇಳನ, ವಸ್ತು ಪ್ರದರ್ಶನ, ಲಕ್ಷದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ

ಆಕರ್ಷಣೆಯಾಗಿದೆ. ದೀಪೋತ್ಸವದ ಸಂಭ್ರಮದ ಇಮ್ಮಡಿಗೊಳಿಸಲು ದೀಪಗಳ ಅಲಂಕಾರಗಳಿಂದ ಕ್ಷೇತ್ರ ನಗರಿ ಶೋಭಿಸುತಿದೆ. ಬಣ್ಣ ಬಣ್ಣದ ದೀಪಗಳ ಝಗಮಗಿಸುವ ಬೆಳಕು ಭಕ್ತರ ಮನಸ್ಸನ್ನು ಸೂರೆಗೊಳಿಸುತ್ತದೆ. ಧರ್ಮಸ್ಥಳದ ಮಂಜುನಾಥ ದೇವಳ ಲಕ್ಷಾಂತರ ವಿದ್ಯುತ್ ದೀಪಗಳ ಅಲಂಕಾರದಿಂದ ಝಗಮಗಿಸುತ್ತದೆ. ದೇವಳದ ಕಮಾನು, ಬೀದಿಗಳು ಮತ್ತು ಇತರ ಕಟ್ಟಡಗಳ ಮೇಲೆ ವರ್ಣರಂಜಿತ ದೀಪಗಳ

ಅಲಂಕಾರ ಮಾಡಲಾಗಿದೆ. ಎಲ್ಲೆಲ್ಲೂ ಕಂಡು ಬರುವ ದೀಪಗಳ ಮೆರುಗು ಭಕ್ತರ ಮನಸ್ಸನ್ನು ಮತ್ತಷ್ಟು ಸೆಳೆಯುತ್ತಿದೆ. ಅದ್ಬುತ ಬೆಳಕಿನ ಮಾಯಾಲೋಕದಲ್ಲಿ ಧರ್ಮಸ್ಥಳ ಮಿಂದೆದ್ದಿದೆ.
ವಿವಿಧ ತರಹದ ವಿದ್ಯುತ್ ದೀಪಗಳು ಗೂಡು ದೀಪ, ಮಿಣುಕು ದೀಪ, ಹೀಗೆ ಅನೇಕಾನೇಕ ತರಹದ ವಿದ್ಯುತ್ ದೀಪಗಳು ಚಿತ್ತಾಕರ್ಷಕವಾಗಿದೆ. ಮಂಜುನಾಥನ ಸನ್ನಿಧಿ ಸಂಪೂರ್ಣ ಬೆಳಕಿನಿಂದ ಕಣ್ಮನ ಸೆಳೆಯುತ್ತಿದೆ. ಮದುವನಗಿತ್ತಿಯಂತೆ ಬೀದಿಗಳು ಶೃಂಗಾರಗೊಂಡು ಉತ್ಸವದ ಕಳೆ ಹೆಚ್ಚಿಸಿದೆ.









