ಸಂಪಾಜೆ: ಸಂಪಾಜೆ ಗ್ರಾಮದ ದರ್ಕಾಸ್ ಅಂಗನವಾಡಿ ಕೇಂದ್ರ ಹಾಗೂ ಅರೋಗ್ಯ ಸಹಾಯಕಿ ಕೇಂದ್ರದ ಬಳಿ ವಿಧಾನ ಪರಿಷತ್ ಸದಸ್ಯರಾದ ಬಿ. ಎಮ್. ಪಾರೂಕ್ ಅನುದಾನ 3 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಆವರಣ ಗೋಡೆ ಹಾಗೂ ದರ್ಕಾಸ್ ಕಾಂಕ್ರಿಟ್ ಚರಂಡಿಯ ಉದ್ಘಾಟನೆಯನ್ನು
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ನೆರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಮಾಜಿ ಅಧ್ಯಕ್ಷರಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೊಜಾ, ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾಸ ಸುಮತಿ ಶಕ್ತಿವೇಲು, ಅನುಪಮಾ, ವಿಮಲಾ, ಸಹಕಾರಿ ಸಂಘದ ನಿರ್ದೇಶಕರಾದ ಗಣಪತಿ ಭಟ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಆಶಾ ವಿನಯಕುಮಾರ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ, ಸಿ. ಎಮ್. ಅಬ್ದುಲ್ಲ, ಗೋಪಾಲ ದರ್ಕಾಸ್, ರುಕ್ಮಯ ಗೌಡ, ಜನಾರ್ದನ ಗೌಡ, ದಿನಕರ ಗೌಡ ಸಣ್ಣ ಮನೆ, ಪುಟ್ಟಯ್ಯ ಗೌಡ, ವಿನಯ ದರ್ಕಾಸ್, ಸಫ್ವಾನ್, ಅಯ್ಯುಬ್ ದರ್ಕಾಸ್, ಮಧುಸೂದನ, ಶಾರದಾ,ರೋಹಿಣಿ ಸತ್ಯಜಿತ್, ಉಬೈಸ್ ಗೂನಡ್ಕ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯರಾದ ಪಿ.ಕೆ.ಅಬೂಸಾಲಿ ಗೂನಡ್ಕ ಸ್ವಾಗತಿಸಿ, ಶೌವಾದ್ ಗೂನಡ್ಕ ವಂದಿಸಿದರು.