ಬೆಳ್ಳಾರೆ:ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ನೂತನ ಶಾಖೆ ಸುಳ್ಯ ತಾಲೂಕಿನ ಬೆಳ್ಳಾರೆ ಮುಖ್ಯ ರಸ್ತೆಯ ಅಮ್ಮು ರೈ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.ಲ್ಯಾಬ್ ಯಂತ್ರೋಪಕರಣಗಳ ರಿಬ್ಬನ್ ಕತ್ತರಿಸಿ, ದೀಪ ಬಳಗಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ
ರಾಜ್ಯದಲ್ಲೇ ಪ್ರಥಮ ಎನ್ನುವ ಯಂತ್ರೋಪಕರಣವನ್ನು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಪರಿಚಯಿಸುತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.
ಬೆಳ್ಳಾರೆ ಪೊಲೀಸ್ ಉಪನಿರೀಕ್ಷಕ ಡಿ.ಎನ್. ಈರಯ್ಯ ಮಾತನಾಡಿ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಯವರು ಬೆಳ್ಳಾರೆ ಜನತೆಗೆ ಅಗತ್ಯವಿರುವ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ರಕ್ತ ತಪಾಸಣೆ ವ್ಯವಸ್ಥೆಯನ್ನು ಕಲ್ಪಿಸಿರುವುದು ಶ್ಲಾಘನೀಯ ಎಂದರು.

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು,ಅಮ್ಮು ರೈ ಕಟ್ಟಡ ಮಾಲಕರಾದ ರಾಕೇಶ್ ಶೆಟ್ಟಿ, ನವೀನ್ ಕುಮಾರ್ ರೈ ಟಿ,ಅಜಪಿಲ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಹಿರಿಯ ಉದ್ಯಮಿ ಹಾಜಿ ಮಮ್ಮಾಲಿ,ಬೆಳ್ಳಾರೆ ಮಸೀದಿ ಅಧ್ಯಕ್ಷ ಯು ಹೆಚ್ ಅಬೂಭಕ್ಕರ್, ಹಿರಿಯ ಉದ್ಯಮಿ ಮಂಜಪ್ಪ ರೈ,ಕಾಮಧೇನು ಗ್ರೂಪ್ಸ್ನನ ಮಾಧವ ಗೌಡ,ವಿನೋದ್ ರೈ ಪಾಲ್ತಡು,ಚೇತನ್ ಪ್ರಕಾಶ್ ರವರ ತಂದೆ ಡಾ.ಚಂದ್ರಶೇಖರ್,ಪುತ್ತೂರು ಧನ್ವಂತರಿ ಆಸ್ಪತ್ರೆಯ ವೈದ್ಯರಾದ ಡಾ.ರವೀಂದ್ರ,ಡಾ.ಪ್ರಸನ್ನ ಭಟ್, ಕಿರಣ್ ಕುಮಾರ್, ಡಾ.ತಿಲಕ್, ಪ್ರಗತಿಪರ ಕೃಷಿಕರಾದ ಸುಬ್ರಾಯ ಭಟ್ ಪಂಜ,ಸೇರಿದಂತೆ ಅನೇಕ ವೈದ್ಯರು ಹಿತೈಷಿಗಳು ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದರು.
ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿ ಆಡಳಿತ ನಿರ್ದೇಶಕ ಚೇತನ್ ಪ್ರಕಾಶ್ ಕಜೆ ಲ್ಯಾಬ್ ನಲ್ಲಿ ದೊರೆಯುವ ರಕ್ತ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.ಪಶುಪತಿ ಶರ್ಮಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಪುತ್ತೂರಿನಲ್ಲಿ ಕಳೆದ ಇಪ್ಪತ್ತೆರಡು ವರ್ಷಗಳಿಂದ ರಕ್ತ ತಪಾಸಣೆಯಲ್ಲಿ ತನ್ನದೇ ಆದ ವಿಶೇಷತೆಯೊಂದಿಗೆ ನಿಖರ ,ತ್ವರಿತ ಹಾಗೂ ಪಾರದರ್ಶಕ ಪಲಿತಾಂಶದ ಮೂಲಕ ವೈದ್ಯರುಗಳು ಶಿಫಾರಸ್ಸು ಮಾಡುವ ಹಾಗೂ ಅಸಂಖ್ಯಾತ ಜನರ ನಂಬಿಕೆ ಮತ್ತು ವಿಶ್ವಾಸದಿಂದ ಪುತ್ತೂರಿನಲ್ಲಿ ಮನೆಮಾತಾಗಿರುವ ಧನ್ವಂತರಿ ಕ್ಲಿನಿಕ್ ಇದೀಗ ಬೆಳ್ಳಾರೆಯಲ್ಲಿ ಶುಭಾರಂಭಗೊಂಡಿದೆ.





