ಸುಳ್ಯ: ಸುಳ್ಯದ ಕೃಷಿ ಯಂತ್ರೋಪಕರಣ ತಯಾರಕರು, ಮಾರಾಟಗಾರರು ಹಾಗೂ ದುರಸ್ತಿ ಮಾಡುವ ಮಳಿಗೆ ‘ದೇವಿ ಇಂಜಿನಿಯರಿಂಗ್ ಏಜೆನ್ಸೀಸ್’ ಸೆ.14ರಂದು ಶನಿವಾರ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ. ಹಳೆಗೇಟಿನ ಸಂತೃಪ್ತಿ ಹೋಟೆಲ್ನ ಸಮೀಪದಲ್ಲಿ ರೆಹಮಾನಿಯಾ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಳ್ಳಲಿದೆ. ಸೆ.14ರಂದು ಪೂ.10ಕ್ಕೆ ನಡೆಯುವ ಸಮಾರಂಭದಲ್ಲಿ
ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ ಉದ್ಘಾಟಿಸುವರು. ಪ್ರಗತಿಪರ ಕೃಷಿಕರಾದ ಜಾನ್ ವಿಲಿಯಂ ಲಸ್ರಾದೋ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಪಂಜ ದೇವಿ ಹ್ಯಾಮರ್ಸ್ನ ಮಾಲಕರಾದ ನವೀನ್ ಕುಮಾರ್ ಚೀಮುಳ್ಳು, ರೆಹಮಾನಿಯಾ ಕಾಂಪ್ಲೆಕ್ಸ್ನ ಮಾಲಕ ಮಹಮ್ಮದ್ ಮುಸ್ತಫಾ ಅವರು ಭಾಗವಹಿಸಲಿದ್ದಾರೆ ಎಂದು ದೇವಿ ಇಂಜಿನಿಯರಿಂಗ್ ಏಜೆನ್ಸೀಸ್ನ ಮಾಲಕರಾದ ಸೀತಾರಾಮ ಚೀಮುಳ್ಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.