ಸುಳ್ಯ: ಸುಳ್ಯದ ಕೃಷಿ ಯಂತ್ರೋಪಕರಣ ತಯಾರಕರು, ಮಾರಾಟಗಾರರು ಹಾಗೂ ದುರಸ್ತಿ ಮಾಡುವ ಮಳಿಗೆ ‘ದೇವಿ ಇಂಜಿನಿಯರಿಂಗ್ ಏಜೆನ್ಸೀಸ್’ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಜ್ಯೋತಿ ವೃತ್ತದ ಬಳಿಯ ಲಸ್ರಾದೋ ಕಾಂಪ್ಲೆಕ್ಸ್ನಿಂದ ಸೆ.14ರಂದು ಶನಿವಾರ ನೂತನ ಕಟ್ಟಡ ಹಳೆಗೇಟಿನ ಸಂತೃಪ್ತಿ ಹೋಟೆಲ್ ಸಮೀಪದಲ್ಲಿ ರೆಹಮಾನಿಯಾ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಸೆ.14ರಂದು ಪೂ. ನಡೆದ ಸಮಾರಂಭದಲ್ಲಿ
ಶ್ರೀ ವೆಂಕಟ್ರಮಣ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ ಉದ್ಘಾಟಿಸಿದರು. ಪ್ರಗತಿಪರ ಕೃಷಿಕರಾದ ಜಾನ್ ವಿಲಿಯಂ ಲಸ್ರಾದೋ ದೀಪ ಪ್ರಜ್ವಲನೆ ಮಾಡಿದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ, ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್,
ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಪಂಜ ದೇವಿ ಹ್ಯಾಮರ್ಸ್ನ ಮಾಲಕರಾದ ನವೀನ್ ಕುಮಾರ್ ಚೀಮುಳ್ಳು, ರೆಹಮಾನಿಯಾ ಕಾಂಪ್ಲೆಕ್ಸ್ನ ಮಾಲಕ ಮಹಮ್ಮದ್ ಮುಸ್ತಫಾ ಅವರು ಭಾಗವಹಿಸಿದ್ದರು. ದೇವಿ ಇಂಜಿನಿಯರಿಂಗ್ ಏಜೆನ್ಸೀಸ್ನ ಮಾಲಕರಾದ ಸೀತಾರಾಮ ಚೀಮುಳ್ಳು ಹರಿಯಪ್ಪ ಗೌಡ ಚೀಮುಳ್ಳು, ಪುಷ್ಪ ಹರಿಯಪ್ಪ ಗೌಡ ಚೀಮುಳ್ಳು, ಪುಷ್ಪಾವತಿ ಸೀತಾರಾಮ, ಅನ್ಸುಮಾನ್ ಮತ್ತು ಅನಿಂದ್ರಿತ ಮತ್ತಿತರರು ಉಪಸ್ಥಿತರಿದ್ದರು. ಪುಷ್ಪಾವತಿ ಸೀತಾರಾಮ ಸ್ವಾಗತಿಸಿ, ಲತಾ ಸದಾನಂದ ಮಾವಜಿ ವಂದಿಸಿದರು. ಚೆನ್ನಕೇಶವ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿದರು.
ಪ್ರಮುಖರಾದ ಲೋಕೇಶ್ ಅಂಬೆಕಲ್ಲು, ಮಹಮ್ಮದ್ ಇಕ್ಬಾಲ್ ಎಲಿಮಲೆ, ನ.ಪಂ.ಸದಸ್ಯ ಸಿದ್ದಿಕ್ ಕೊಕ್ಕೊ, ಉಷಾ ಜಯರಾಮ, ಲತಾ ಕುದ್ಪಾಜೆ, ಚಂದ್ರಶೇಖರ ಪೇರಾಲು,ಡಾ.ಎನ್.ಎ. ಜ್ಞಾನೇಶ್, ಚಂದ್ರ ಕೋಲ್ಚಾರ್, ಹಿಮಕರ ರಾಜ್ ಮಾವಜಿ, ದೇವಿಪ್ರಸಾದ್ ಚೀಮುಳ್ಳು, ಗುರು ಪಂಜ ಮತ್ತಿತರರು ಉಪಸ್ಥಿತರಿದ್ದರು.