ಸುಳ್ಯ:ಆಧುನಿಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಯಂತ್ರಗಳ ಬಳಕೆ ವ್ಯಾಪಕವಾಗಿದೆ. ಯಂತ್ರಗಳು ಇಲ್ಲದೆ ಇಂದು ಯಾವುದೇ ಕ್ಷೇತ್ರಗಳೂ ಮುನ್ನಡೆಸಲು ಸಾಧ್ಯವಿಲ್ಲ ಎಂಬ ಸ್ಥಿತಿ ಎಲ್ಲೆಡರ ನಿರ್ಮಾಣವಾಗಿದೆ. ಇದರಿಂದ ಕೃಷಿ ಕ್ಷೇತ್ರವೂ ಹೊರತಾಗಿಲ್ಲ. ಕೃಷಿ ಕ್ಷೇತ್ರದಲ್ಲಿ ಯಂತ್ರೋಪಕರಣಗಳ ಬಳಕೆ ಈಗ ಹಿಂದೆಂದಿಗಿಂತಲೂ ಅಧಿಕವಾಗಿದೆ. ಕೃಷಿ ಯಂತ್ರೋಪಕರಣಗಳ ಬಗ್ಗೆ ಹತ್ತಾರು ಆವಿಷ್ಕಾರಗಳು, ಸಂಶೋಧನೆಗಳು ನಡೆಯುತ್ತಲೇ ಇದೆ.ಪ್ರತಿಯೊಂದು ಕೆಲಸಕ್ಕೂ
ಯಂತ್ರಗಳು ಬೇಕಾಗಿದೆ. ಕಾಲ ಬದಲಾದಂತೆ ಸುಧಾರಿತ ಯಂತ್ರಗಳು ಮಾರುಕಟ್ಟೆಗೆ ಬರುತಿದೆ. ಈ ಹಿನ್ನಲೆಯಲ್ಲಿ ಸುಳ್ಯದ ಕೃಷಿಕರ ಅಗತ್ಯಕ್ಕೆ ತಕ್ಕಂತೆ ಆಧುನಿಕ ಕೃಷಿ ಯಂತ್ರಗಳನ್ನು ತಯಾರಿಸುವ, ಮಾರಾಟ ಮಾಡುವ ಮತ್ತು ದುರಸ್ತಿ ಮಾಡುವ ಸಂಸ್ಥೆ ದೇವಿ ಇಂಜಿನಿಯರಿಂಗ್ ಏಜೆನ್ಸೀಸ್. ಕಳೆದ ಒಂದೂವರೆ ದಶಕಗಳಿಂದ ಕೃಷಿ ಕ್ಷೇತ್ರದ ಯಂತ್ರಗಳ ಕ್ಷೇತ್ರದಲ್ಲಿ ಕಾರ್ಯಾಚರಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ ದೇವಿ ಇಂಜಿನಿಯರಿಂಗ್ ಏಜೆನ್ಸೀಸ್ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ.
ಅಡಿಕೆ ಸುಲಿಯುವ ಯಂತ್ರ
ಜ್ಯೋತಿ ವೃತ್ತದ ಲಸ್ರಾದೋ ಕಾಂಪ್ಲೆಕ್ಸ್ನಿಂದ ಹಳೆಗೇಟಿನ ಸಂತೃಪ್ತಿ ಹೋಟೆಲ್ನ ಸಮೀಪ ರೆಹಮಾನಿಯಾ ಕಾಂಪ್ಲೆಕ್ಸ್ಗೆ ಸ್ಥಳಾಂತರಗೊಂಡು ಸುಸಜ್ಜಿತ ಮಳಿಗೆ ಉದ್ಘಾಟನೆಗೊಂಡಿದೆ.
ಹಲವು ಆಧುನಿಕ ಯಂತ್ರಗಳನ್ನು ದೇವಿ ಇಂಜಿನಿಯರಿಂಗ್ನವರು ಸ್ವತಃ ನಿರ್ಮಾಣ ಮಾಡಿ ಕೃಷಿಕರಿಗೆ ಒದಗಿಸುತ್ತಾರೆ. ಐವರ್ನಾಡಿನ ತಮ್ಮ ಇಂಜನಿಯರಿಂಗ್ ಯೂನಿಟ್ನಲ್ಲಿ ನಿರಂತರ ಸಂಶೋಧನೆಗಳ ಮೂಲಕವಹಲವು ಯಂತ್ರಗಳನ್ನು ನಿರ್ಮಾಣ ಮಾಡುತ್ತಾರೆ. ಕೃಷಿಕರಿಗೆ ಬಹು ಉಪಯೋಗಿಯಾದ ಸುಧಾರಿತ ಅಡಿಕೆ ಸುಲಿಯುವ ಯಂತ್ರ, ಕರಿಮೆಣಸು ಗೆರೆ ಬಿಡಿಸುವ ಯಂತ್ರಗಳನ್ನು ತಯಾರಿಸಿ ಕೃಷಿಕರಿಗೆ
ಕರಿಮೆಣಸು ಗೆರೆ ಬಿಡಿಸುವ ಯಂತ್ರ
ಒದಗಿಸುತ್ತಾರೆ. ಅಡಿಕೆ ಒಣಗಿಸುವ ಅತ್ಯಾಧುನಿಕ ಸೋಲಾರ್ ಡ್ರೈಯರ್ ನಿರ್ಮಾಣ ಮಾಡುತ್ತಾರೆ. ವಿವಿಧ ಬಗೆಯ ಕತ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಅಲ್ಲದೆ ಇವರು ಮುಖ್ಯವಾಗಿ ಇಂಜಿನ್ ಚಾಲಿತ ಯಂತ್ರಗಳನ್ನು ಮಾರಾಟ ಮಾಡುತ್ತಾರೆ. ಮರ ಕತ್ತರಿಸುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ, ಸ್ಪ್ರೇಯರ್, ಕಾರ್ ವಾಶ್ ಯಂತ್ರಗಳು ಸೇರಿ ವಿವಿಧ ಯಂತ್ರಗಳನ್ನು ಮಾರಾಟ ಮಾಡುತ್ತಾರೆ. ಎಲ್ಲಾ ಯಂತ್ರಗಳ ಸ್ಪೇರ್ ಪಾರ್ಟ್ಸ್ಗಳು ಲಭ್ಯವಿದೆ. ಅಲ್ಲದೆ ಎಲ್ಲಾ ಯಂತ್ರಗಳ ದುರಸ್ತಿಯನ್ನೂ ಮಾಡಿ ಕೊಡಲಾಗುತ್ತದೆ ಎನ್ನುತ್ತಾರೆ.ದೇವಿ ಇಂಜಿನಿಯರಿಂಗ್ ಏಜೆನ್ಸಿಯ ಮಾಲಕರಾದ ಸೀತಾರಾಮ ಚೀಮುಳ್ಳು ಹಾಗೂ ಪುಷ್ಪಾವತಿ ಸೀತಾರಾಮ ಅವರು.
ಸುಳ್ಯ ಹಳೆಗೇಟಿನ ಮುಖ್ಯ ರಸ್ತೆಯ ರೆಹಮಾನಿಯಾ ಕಾಂಪ್ಲೆಕ್ಸ್ನ ವಿಶಾಲವಾದ ಕಟ್ಟಡದಲ್ಲಿ ದೇವಿ ಇಂಜಿನಿಯರಿಂಗ್ ಏಜೆನ್ಸಿಯ ಮಳಿಗೆ ಕಾರ್ಯಾರಂಭ ಮಾಡಿದ್ದು ಕೃಷಿಕರು ಕೃಷಿ ಕ್ಷೇತ್ರದ ಯಂತ್ರೋಪಕರಣ ಸಂಬಂಧಿ ವಿಷಯಗಳಿಗೆ ಸಂಪರ್ಕಿಸಬಹುದು.
ದೂರವಾಣಿ ಸಂಖ್ಯೆ: 9448152445