ಸುಳ್ಯ:ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಬಾಯಿ ಮತ್ತು ಮುಖದ ಶಸ್ತ್ರಚಿಕಿತ್ಸಾ ವಿಭಾಗದ ವತಿಯಿಂದ ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸಕರ ದಿನಾಚಾರಣೆ ಆಚರಿಸಲಾಯಿತು. ಈ ಪ್ರಯುಕ್ತ ಕೆ.ವಿ.ಜಿ. ಐ.ಟಿ.ಐ. ಕಾಲೇಜಿನ ವಿದ್ಯಾರ್ಥಿಗಳಿಗೆ “ರಸ್ತೆ ಸುರಕ್ಷೆ ಮತ್ತು ಅಪಾಘಾತಗಳಲ್ಲಿ ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸಕರ ಪಾತ್ರದ ಬಗ್ಗೆ
ಮಾಹಿತಿ ನೀಡುವ ಕಾರ್ಯಕ್ರಮವು ಜರುಗಿತು. ವಿಭಾಗ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಡಿ. ‘ರಸ್ತೆ ಸುರಕ್ಷತೆ ಮತ್ತು ಮುಖದ ಗಾಯಗಳನ್ನು ತಡೆಗಟ್ಟುವಲ್ಲಿ ಹೆಲ್ಮೆಟ್’ನ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ಮಹಾಬಲೇಶ್ವರ್ ಸಿ. ಹೆಚ್ ದವಡೆಗಳ ಮುರಿತ, ಗಾಯ ಮತ್ತು ಇನ್ನಿತರ ಮುಖದ ಸಮಸ್ಯೆಗಳಲ್ಲಿ ನೀಡುವ ಚಿಕಿತ್ಸೆ ಗಳ ಬಗ್ಗೆ ಮಾಹಿತಿ ನೀಡಿದರು. ಕೆ.ವಿ.ಜಿ. ಐ.ಟಿ.ಐ. ಕಾಲೇಜಿನ ಪ್ರಾಂಶುಪಾಲ ಚಿದಾನಂದ ಮುಖ್ಯ ಅತಿಥಿಗಳಾಗಿದ್ದರು. ದಿನೇಶ್ ಮಡ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಭವಾನಿಶಂಕರ್ ಅಡ್ತಲೆ ಕಾರ್ಯಕ್ರಮ ನಿರ್ವಹಿಸಿದರು.
ಅರಿವು ಮೂಡಿಸುವ ಕಾರ್ಯಕ್ರಮದ ನಂತರ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಮುಖ ಮತ್ತು ದವಡೆಯ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಪ್ರಾಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಇನ್ನಿತರ ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ದಿನಾಚರಣೆಯ ಸಂಭ್ರಮವನ್ನು ಆಚರಿಸಲಾಯಿತು.