ಸುಳ್ಯ: ಕೆ.ವಿ.ಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ಮುಂದುವರಿದ ದಂತ ಶಿಕ್ಷಣ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿ, ಮುಂದುವರಿದ ದಂತ ಶಿಕ್ಷಣದ ಕಾರ್ಯಕ್ರಮದ
ಮಹತ್ವವನ್ನು ತಿಳಿಸಿದರು. ಛತ್ತಿಸ್ಗಡ ರಾಜ್ಯದ ರಾಯಪುರದ ಖ್ಯಾತ ದಂತ ವೈದ್ಯೆ ಡಾ.ಕೃಷ್ಣವ್ಯಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಉಪನ್ಯಾಸ ನೀಡಿ ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ರಾಯಪುರದ ಖ್ಯಾತ ದಂತ ವೈದ್ಯ ಡಾ. ಸುನಿಲ್ವ್ಯಾಸ್ ಉಪಸ್ಥಿತರಿದ್ದರು. ಕನ್ಸರ್ವೇಟಿವ್ ಡೆಂಟಿಸ್ಟ್ರಿ ವಿಭಾಗ ಮುಖ್ಯಸ್ಥ ಡಾ.ಕೃಷ್ಣಪ್ರಸಾದ್ ಎಲ್. ಸ್ವಾಗತಿಸಿದರು. ಕನ್ಸರ್ವೇಟಿವ್ ಡೆಂಟಿಸ್ಟ್ರಿವಿಭಾಗದ ಡಾ. ನವೀನ್ ಕುಮಾರ್ ಕೆ. ಪರಿಚಯಿಸಿದರು. ಡಾ. ಕೃಷ್ಣವೇಣಿ ಮರೆಲ್ಲಾ ವಂದನಾರ್ಪಣೆಗೈದರು. ಡಾ. ಮನೀಷಾ ರೈ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಮಂಗಳೂರಿನ ವಿವಿಧ ದಂತ ಕಾಲೇಜುಗಳ ಸ್ನಾತಕೋತ್ತರ ವಿದ್ಯಾರ್ಥಿಗಳು ಆಗಮಿಸಿದ್ದರು.