ಸುಳ್ಯ:ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಹಲ್ಲು ಸಂರಕ್ಷಣೆ ಹಾಗೂ ಬೇರುನಾಳ ಚಿಕಿತ್ಸಾ ವಿಭಾಗದ ವತಿಯಿಂದ ಕಾನ್ಸ್ ಎಂಡೋ ವೀಕ್ 2023:ಇದರ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಸಿಡಿಇ ಕಾರ್ಯಕ್ರಮ ಹಾಗೂ ಆಶಾ ಕಾರ್ಯಕರ್ತೆಯರಿಗೆ ದಂತ ಆರೋಗ್ಯದ ಮಾಹಿತಿ ಕಾರ್ಯಕ್ರಮ ನಡೆಯಿತು.ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ. ಮೋಕ್ಷಾ ನಾಯಕ್ ದಂತ ಆರೋಗ್ಯ ಮಾಹಿತಿ ಕಾರ್ಯಕ್ರಮದ
ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಡಾ.ಅನೂಪ್.ವಿ. ನಾಯರ್ ಅವರು ಕಾನ್ಸ್ ಎಂಡೋ ವೀಕ್ ೨೦೨೩ ಅನ್ನು ಉದ್ಘಾಟಿಸಿದರು. ಸಿಡಿಇ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಡಾ. ಅನೂಪ್ ವಿ. ನಾಯರ್ ಅವರು ಬಗ್ಗೆ ಉಪನ್ಯಾಸ ನೀಡಿದರು. ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಅಂಗನವಾಡಿ ಕಾರ್ಯಕರ್ತರಿಗೆ ಮಾಹಿತಿ ಕಾರ್ಯಕ್ರಮವನ್ನು ಪ್ರಾಂಶುಪಾಲೆ ಡಾ.ಮೋಕ್ಷಾ ನಾಯಕ್ ಉದ್ಘಾಟಿಸಿದರು. ಕರ್ನ್ಸ್ಸರವೇಟಿವ್ ಡೆಂಟಿಸ್ಟ್ರಿ ಮತ್ತು ಎಂಡೋಡಾಂಟಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಎಲ್.ಕೃಷ್ಣಪ್ರಸಾದ್, ಸಿಡಿಪಿಒ ರಶ್ಮಿ ಅಶೋಕ್ ಅತಿಥಿಗಳಾಗಿದ್ದರು. ಸಿಡಿಪಿಒ ರಶ್ಮಿ ಅಶೋಕ್ ಅವರು ಮಕ್ಕಳ ಹಲ್ಲುಗಳ ಪ್ರಸ್ತುತ ನಿರ್ಲಕ್ಷ್ಯದ ಬಗ್ಗೆ ಮತ್ತು ಅದರ ರಕ್ಷಣೆ ಏಕೆ ಮುಖ್ಯ ಎಂಬುದರ ಬಗ್ಗೆ ಮಾತನಾಡಿದರು.
ಆಶಾ ಕಾರ್ಯಕರ್ತೆಯರಿಗೆ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ವಿವಿಧ ವಿಭಾಗ ಮುಖ್ಯಸ್ಥರಿಂದ ‘ದಂತ ಆರೋಗ್ಯ ಮಾಹಿತಿ’ ನೀಡಲಾಯಿತು. ಡಾ.ರಮ್ಯಾ ಮತ್ತು ಡಾ.ನವೀನ್ ತರಬೇತಿ ನೀಡಿದರು. ಐಪಿಎಸ್ ಶಾಲಾ ಮಕ್ಕಳಿಗೆ ದಂತವೈದ್ಯಕೀಯ ಮತ್ತು ಎಂಡೋಡಾಂಟಿಕ್ಸ್ ವಿಭಾಗದ ಸ್ತಾತಕೋತ್ತರ ಪದವಿ ವಿದ್ಯಾರ್ಥಿಳಿಂದ ಮೌಖಿಕ ಆರೋಗ್ಯ ಶಿಕ್ಷಣವನ್ನು ನಡೆಸಲಾಯಿತು. ಕಾನ್ಸ್ ಎಂಡೋ ವೀಕ್ ಅಂಗವಾಗಿ ಪ್ರೌಢಶಾಲಾ ಮಕ್ಕಳಿಗಾಗಿ ಅಂತರ ಶಾಲಾ ಪ್ರಬಂಧ ಸ್ಪರ್ಧೆ, ಅಂತರ್ ಕಾಲೇಜು ರಸಪ್ರಶ್ನೆ, ದಂತ ಛಾಯಾಗ್ರಹಣ, ಕಿರುಚಿತ್ರ, ರಂಗೋಲಿ, ಇ-ಪೋಸ್ಟರ್ ಮುಂತಾದ ವಿವಿಧ ಸ್ರ್ಧೆಗಳನ್ನು ಕೆವಿಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆಸಲಾಯಿತು. ಕಾನ್ಸ್ ಎಂಡೋ ವೀಕ್ ಅಂಗವಾಗಿ ಮಂಡೆಕೋಲು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಮೌಖಿಕ ತಪಾಸಣೆ ಶಿಬಿರವನ್ನು ನಡೆಸಲಾಯಿತು.