ಸುಳ್ಯ:ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ನಡೆಸಿದ ದಂತ ವ್ಯೆದ್ಯಕೀಯ (ಬಿ.ಡಿ.ಯಸ್) ಹಾಗೂ ಸ್ನಾತಕೋತ್ತರ ವಿಭಾಗ (ಎಂ.ಡಿ.ಎಸ್) ಪರೀಕ್ಷೆಗಳಲ್ಲಿ ಸುಳ್ಯದ ಕೆ.ವಿ.ಜಿ. ಡೆಂಟಲ್ ಕಾಲೇಜಿನ ವಿದ್ಯಾರ್ಥಿಗಳು ದಂತ ವ್ಯೆದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ 7 ರ್ಯಾಂಕುಗಳನ್ನು, ದಂತ ವ್ಯೆದ್ಯಕೀಯ ಪದವಿ ವಿಭಾಗದಲ್ಲಿ 18 ರ್ಯಾಂಕ್ಗಳು ಸೇರಿ ಒಟ್ಟು 25 ರ್ಯಾಂಕ್ಗಳನ್ನು ಪಡೆದಿದ್ದಾರೆ.ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗದಲ್ಲಿ ಡಾ. ಬಿ.ಕೆ. ರಕ್ಷಿತ್ ಎಂ.ಡಿ.ಎಸ್. ಪರೀಕ್ಷೆಯಲ್ಲಿ
ಪ್ರ ಥಮ ರ್ಯಾಂಕ್ ಪಡೆದಿದ್ದಾರೆ.ಅರ್ಥೋಡಾಂಟಿಕ್ಸ್ ವಿಭಾಗದಲ್ಲಿ
ಪಿ.ಜಿ. ಡಿಪ್ಲೋಮಾ ಪರೀಕ್ಷೆಯಲ್ಲಿ ಡಾ. ಬೀಫಾತಿಮಾ ಕೆ. ಪ್ರಥಮ ರ್ಯಾಂಕ್ ಪಡೆದಿದ್ದಾರೆ.ಪ್ರೊಸ್ತೋಡಾಂಟಿಕ್ಸ್ ವಿಭಾಗದಲ್ಲಿ
ಡಾ. ಮೊಹಮ್ಮದ್ ಸಫ್ವಾನ್ ಶೇಕ್ ಎಂ.ಡಿ.ಎಸ್. ಪರೀಕ್ಷೆಯಲಿ 2ನೇ ರ್ಯಾಂಕ್, ಡಾ. ಹಾಂಬರೆಡೆ ಸ್ವಾತಿ ವಿಠಲರಾವ್ 3ನೇ ರ್ಯಾಂಕ್ ಹಾಗೂ ಡಾ.ನಿಧಿ ಶೆಟ್ಟಿ ಮತ್ತು ಎಸ್.ಡಿ. ಭುಮಿಕಾ 10ನೇ ರ್ಯಾಂಕ್ ಪಡೆದಿದ್ದಾರೆ.

ಪೆರಿಯೋಡಾಾಂಟಿಕ್ಸ್ ವಿಭಾಗದಲ್ಲಿ ಡಾ. ಪೂಜಾ ಹೆಚ್, ಎಂ.ಡಿ.ಎಸ್. ಪರೀಕ್ಷೆಯಲ್ಲಿ 9ನೇ ರ್ಯಾಂಕ್ ಪ್ಡೆದಿರುತ್ತಾ ರೆ.ದಂತ ವೈದ್ಯಕೀಯ ಪದವಿಯ ತೃತೀಯ ಬಿ.ಡಿ.ಯಸ್. ಪದವಿ ಪರೀಕ್ಷೆಯಲ್ಲಿ ಡಾ.ಪಿ.ಜೆ. ಧನ್ಯತಾ 3ನೇ ರ್ಯಾಂಕ್ ಹಾಗೂ ಡಾ. ನಂದಿತಾ ಎ ಯವರು 10ನೇ ರ್ಯಾಂಕ್ ಪ್ಡೆದಿರುತ್ತಾ ರೆ. ಬಿ.ಡಿ.ಯಸ್. ಪದವಿಯ ವಿಷಯವಾರು ರ್ಯಾಂಕ್ಗಳಲ್ಲಿ ಪ್ರಥಮ ಬಿ.ಡಿ.ಯಸ್. ಡೆಂಟಲ್ ಅನಾಟಮಿಯಲ್ಲಿ ಡಾ.
ಪಿ.ಜೆ. ಧನ್ಯತಾ 10ನೇ ರ್ಯಾಂಕ್,
ಧ್ವ್ವಿತೀಯ ಬಿ.ಡಿ.ಯಸ್. ಡೆಂಟಲ್ ಮೆಟಿರಿಯಲ್ನಲ್ಲಿ ಡಾ. ನಂದಿತಾ ಎ. 4ನೇ ರ್ಯಾಂಕ್, ಡಾ. ನಿಮಿಷ ಜೋಸೆಫ್ 7ನೇ ರ್ಯಾಂಕ್ ಹಾಗೂ ಡಾ. ಅನ್ಷಿ ರಾಗೇಶ್ 8ನೇ ರ್ಯಾಂಕ್ ಪಡೆದಿದ್ದಾರೆ. ಪ್ರಕ್ಲಿನಿಕಲ್ ಕನ್ಸರ್ವೇಟಿವ್ ಡೆಂಟಿಸ್ಟ್ರಿಯಲ್ಲಿ ಡಾ.
ಸ್ಲೆವಿನ್ ಮತ್ತು ಡಾ. ಸ್ವಾತಿ ಎಸ್. ರವರು 10ನೇ ರ್ಯಾಂಕ್, ಪ್ರೋಕ್ಲಿನಿಕಲ್ ಪ್ರೊಸ್ತೋಡಾಂಟಿಕ್ಸ್ನಲ್ಲಿ
ಲೆನಾ ವಿ. ಜೊಲ್ಲಿ 9ನೇ ರ್ಯಾಂಕ್ ಮತ್ತು ಡಾ. ಅಲ್ಪಿ ಜೊಸ್ಸಿ 10ನೇ ರ್ಯಾಂಕ್,
ತೃತೀಯ ಬಿ.ಡಿ.ಯಸ್. ಜನರಲ್ ಮೆಡಿಸಿನ್ ನಲ್ಲಿ ಡಾ. ನಂದಿತಾ ಎ. 4ನೇ ರ್ಯಾಂಕ್, ಡಾ. ಪಿ.ಜೆ. ಧನ್ಯತಾ 7ನೇ ರ್ಯಾಂಕ್, ಡಾ. ಆಥಿರ ಶಿಬು 9ನೇ ರ್ಯಾಂಕ್, ಡಾ. ಅನ್ಷಿ ರಾಗೇಶ್ ಮತು ಡಾ. ಮಿಸ್ಲಾ ರಿಝಾ ಪಿ.ಯಂ. 7ನೇ ರ್ಯಾಂಕ್
ಪಡೆದಿದ್ದಾರೆ. ಓರಲ್ ಪೆಥಾಲಾಜಿನಲ್ಲಿ ಡಾ. ಪಿ.ಜೆ. ಧನ್ಯತಾ 2ನೇ ರ್ಯಾಂಕ್,
ಅಾಂತಿಮ ವರ್ಷ ಬಿ.ಡಿ.ಯಸ್. ಡಾ. ಅನ್ಷಿ ರಾಗೇಶ್ ಓರಲ್ ಮೆಡಿಸಿನ್ನಲ್ಲಿ 7ನೇ ರ್ಯಾಂಕ್ ಮತು ಓರಲ್ ಸರ್ಜರಿಯಲ್ಲಿ
10ನೇ ರ್ಯಾಂಕ್ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.









