ದೇಲಂಪಾಡಿ:ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದರಾಗಿದ್ದ ಕೇದಗಡಿ ಗುಡ್ಡಪ್ಪ ಗೌಡ ಅವರ ಸಂಸ್ಮರಣೆ ಹಾಗೂ ಯಕ್ಷಗಾನ ತಾಳಮದ್ದಳೆ ನಡೆಯಿತು.
ದೇಲಂಪಾಡಿಯ ಕೆದಗಡಿ ವಾಮದೇವ ವೀಣಾ ಅವರ ‘ಸಿಂಧೂರ’ ನೂತನ ಗೃಹ ಪ್ರವೇಶ ಸಂದರ್ಭದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ
ಕಾರ್ಯದರ್ಶಿ ವಿಶ್ವವಿನೋದ ಬನಾರಿ ಅವರ ಸಂಯೋಜನೆಯಲ್ಲಿ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ ನೆರವೇರಿತು. ಸುಪ್ರಸಿದ್ಧ ಯಕ್ಷಗಾನ ಕಲಾವಿದ ಕೇದಗಡಿ ಗುಡ್ಡಪ್ಪ ಗೌಡ ಅವರ ಸಂಸ್ಮರಣೆಯನ್ನು ಸದಾಶಿವ ರೈ ಬೆಳ್ಳಿಪಾಡಿ ನೆರವೇರಿಸಿದರು. ತಾಳಮದ್ದಳೆಯ ಹಿಮ್ಮೇಳದಲ್ಲಿ

ಭಾಗವತರಾಗಿ ಮುಂಡಾಳಗುತ್ತು ಪ್ರಶಾಂತ ರೈ ಪುತ್ತೂರು, ಚಂಡೆ, ಮದ್ದಳೆ ವಾದನದಲ್ಲಿ ವಿಷ್ಣುಶರಣ ಬನಾರಿ, ಅಪ್ಪಯ್ಯ ಮಣಿಯಾಣಿ ಮಂಡೆಕೋಲು, ಸದಾನಂದ ಮಯ್ಯಾಳ, ಬಿ. ಹೆಚ್.ಹೊನ್ನಪ್ಪ ಗೌಡ ಸಹಕರಿಸಿದರು. ಅರ್ಥಧಾರಿಗಳಾಗಿ ಎಂ. ರಮಾನಂದ ರೈ, ರಾಮಣ್ಣ ಮಾಸ್ತರ್ ದೇಲಂಪಾಡಿ, ನಾರಾಯಣ ಮಾಸ್ತರ್ ದೇಲಂಪಾಡಿ, ವೀರಪ್ಪ ಸುವರ್ಣ ಬೆಳ್ಳಿಪಾಡಿ, ರಾಮ ನಾಯ್ಕ ದೇಲಂಪಾಡಿ, ಸಂಜೀವ ರಾವ್ ಮಯ್ಯಾಳ, ವೆಂಕಪ್ಪ,ಗೌಡ ಬೆಳ್ಳಿಪಾಡಿ, ಶಾಂತಾಕುಮಾರಿ ದೇಲಂಪಾಡಿ ಭಾಗವಹಿಸಿದ್ದರು. ನಾಗಪ್ಪ ಕೇದಗಡಿ ಸ್ವಾಗತಿಸಿ, ಈಶ್ವರ ಕುತ್ತಿಮುಂಡ ವಂದಿಸಿದರು.













