ನವದೆಹಲಿ:ಹಿಂದೂಗಳು ಪ್ರಮುಖ ಹಬ್ಬಗಳಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯು ಜಗತ್ತಿನಲ್ಲೇ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ ಎಂದು ಯುನೆಸ್ಕೊ ಸಾರಿದೆ.2025ರ ಪಟ್ಟಿಯನ್ನು ಯುನೆಸ್ಕೊ ಬುಧವಾರ ಬಿಡುಗಡೆ ಮಾಡಿದೆ. ದೀಪಾವಳಿಯೊಂದಿಗೆ ಜಗತ್ತಿನ 19 ಇತರ
ಸಾಂಸ್ಕೃತಿಕ ಪರಂಪರೆಯನ್ನೂ ಹೆಸರಿಸಿದೆ. ಆ ಮೂಲಕ ಅಮೂರ್ತ ಸಾಂಸ್ಕೃತಿಕ ಪರಂಪರೆಗಳ ರಕ್ಷಣೆ ಮತ್ತು ಅವುಗಳ ಮಹತ್ವಗಳ ಕುರಿತು ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿರುವುದಾಗಿಯೂ ಯುನೆಸ್ಕೊ ಹೇಳಿದೆ.ದೀಪಾವಳಿಯೊಂದಿಗೆ ತಂಗೈಲ್ನ ಸಾಂಪ್ರದಾಯಿಕ ಸೀರೆ ನೇಯ್ಗೆ ಕಲೆ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
ಸಾಂಸ್ಕೃತಿಕ ಪರಂಪರೆ ಎಂಬುದು ಕೇವಲ ಸ್ಮಾರಕಕ್ಕಷ್ಟೇ ಸೀಮಿತವಲ್ಲ. ಇದರಲ್ಲಿ ಪರಂಪರೆ ಅಥವಾ ಪರಂಪರಾಗತವಾಗಿ ಬಂದ ಸಂಪ್ರದಾಯಗಳೂ ಸೇರಿವೆ. ಇದರಲ್ಲಿ ಮೌಖಿಕವಾದ ಜನಪದ, ಕಲೆ, ಸಾಮಾಜಿಕ ಪದ್ಧತಿಗಳು, ಆಚರಣೆ, ಹಬ್ಬಗಳು, ಜ್ಞಾನ ಮತ್ತು ಪ್ರಕೃತಿಗೆ ಸಂಬಂಧಿಸಿದ ಆಚರಣೆ, ಕೌಶಲ ಹಾಗೂ ಸಾಂಪ್ರದಾಯಿಕ ಕರಕುಶಲ ಜ್ಞಾನವೂ ಒಳಗೊಂಡಿದೆ.ಯುನೆಸ್ಕೊ ಪಟ್ಟಿಗೆ ಈ ವರ್ಷ ದೀಪಾವಳಿ ಸೇರಿದೆ. ಇದರೊಂದಿಗೆ ಭಾರತದ ಹಲವು ಹಬ್ಬಗಳು ಈ ಪಟ್ಟಿಯನ್ನು ಸೇರಿವೆ. ಕೋಲ್ಕತ್ತದಲ್ಲಿ ದುರ್ಗಾ ಪೂಜೆ,
ಕುಂಭಮೇಳ ಮತ್ತಿತರ ಆಚರಣೆಗಳು ಈ ಹಿಂದೆ ಯುನೆಸ್ಕೋ ಪಟ್ಟಿಗೆ ಸೇರಿತ್ತು.













