ಸುಳ್ಯ:ತಮ್ಮ ವಾರ್ಡ್ನ ಪ್ರತಿ ಮನೆಗೆ ದೀಪಾವಳಿ ಸಿಹಿ ತಿಂಡಿ ಹಂಚುವ ಮೂಲಕ ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡರು ಶುಭಾಶಯ ಕೋರಿದ್ದಾರೆ.ಇಂದು ತಮ್ಮ ನಗರ ಪಂಚಾಯತ್ ವಾರ್ಡ್ ಕೆರೆಮೂಲೆಯಲ್ಲಿ ಮನೆ ಮನೆಗೆ ತೆರಳಿ ಸಿಹಿ ಹಂಚಿದ್ದಾರೆ. ನಗರ ಪಂಚಾಯತ್ನಲ್ಲಿ ಸದಸ್ಯರಿಗೆ, ಅಧಿಕಾರಿಗಳಿಗೆ ಹಾಗೂ

ಸಿಬ್ಬಂದಿಗಳಿಗೆ ಸಿಹಿ ಹಂಚಿದ ಅವರು ಪ್ರೆಸ್ ಕ್ಲಬ್ನಲ್ಲಿ ಪತ್ರಕರ್ತರು ಹಾಗೂ ಅಲ್ಲದ್ದ ಕಾಂಗ್ರೆಸ್ ಮುಖಂಡರಿಗೆ ಸಿಹಿ ಹಂಚಿ ಶುಭ ಕೋರಿದರು.
ವೆಂಕಪ್ಪ ಗೌಡರು ಕಾಂಗ್ರೆಸ್ ಮುಖಂಡರು ಎಲ್ಲಾ ಮನೆಗೆ ತೆರಳಿ ಸಿಹಿ ತಿಂಡಿ ಹಂಚಿದರು. ಕಳೆದ ವರ್ಷವೂ ಅವರು ತಮ್ಮ ವಾರ್ಡ್ನ ಮನೆಗಳಿಗೆ ದೀಪಾವಳಿ ಸಂದರ್ಭದಲ್ಲಿ ಸಿಹಿ ಹಂಚಿದ್ಸರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ ಗೋಕುಲ್ ದಾಸ್, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ, ಶಹೀದ್ ಪಾರೆ, ಅಬ್ದುಲ್ ಖಯ್ಯೂಂ, ಶಾಫಿ ಕುತ್ತಮೊಟ್ಟೆ, ಶ್ಯಾಮ್ ಪ್ರಸಾದ್ ನಿಡ್ಯಮಲೆ ಮತ್ತಿತರರು ಉಪಸ್ಥಿತರಿದ್ದರು.









