ಸುಳ್ಯ: ಸುಳ್ಯ ನಗರ ಪಂಚಾಯತ್ ಕೆರೆಮೂಲೆ ವಾರ್ಡಿನ ಸದಸ್ಯ ಎಂ. ವೆಂಕಪ್ಪಗೌಡ ದೀಪಾವಳಿ ಹಬ್ಬದ ಪ್ರಯುಕ್ತ ತಾನು ಪ್ರತಿನಿಧಿಸಿದ ವಾರ್ಡಿನ ಪ್ರತಿ ಮನೆಗೆ ತೆರಳಿ ಸಿಹಿತಿಂಡಿ ವಿತರಿಸಿ ದೀಪಾವಳಿ ಹಬ್ಬವನ್ನು ಆಚರಿಸಿಕೊಂಡು ಶುಭ ಹಾರೈಸಿದರು.ನಗರ ಪಂಚಾಯತ್ ಸದಸ್ಯರಾದ
ಶರೀಫ್ ಕಂಠಿ, ರಿಯಾಜ್ ಕಟ್ಟೆಕರ್, ಇಂಟಕ್ ಕಾಂಗ್ರೆಸ್ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಫಿ ಕುತ್ತಮೊಟ್ಟೆ ಸ್ಥಳೀಯ ನಿವಾಸಿಗಳಾದ ರಾಜೇಂದ್ರ ಭಟ್, ಹಿರಿಯರಾದ ಬಾಬಾ ಹಾಜಿ, ಸ್ಥಳೀಯರಾದ ನೌಶಾದ್ ಕೆರೆಮೂಲೆ, ಶಹೀದ್ ಪಾರೆ, ರಘು ಕೆರೆಮೂಲೆ, ಕಯ್ಯುಬ್ ಕಟ್ಟೆಕಾರ್,ಶಿಯಾಬ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಬ್ಬದ ಸಂಭ್ರಮ ಎಲ್ಲರೊಂದಿಗೂ ಹಂಚಿಕೊಳ್ಳ ಬೇಕು ಎಂಬ ದೃಷ್ಟಿಯಿಂದ ನನ್ನ ವಾರ್ಡಿನ ಪ್ರತಿಯೊಂದು ಮನೆ ಮನೆಗಳಿಗೂ ಸಿಹಿತಿಂಡಿಯನ್ನು ಹಂಚಿ ದೀಪಾವಳಿಯನ್ನು ಆಚರಿಸಲಾಗಿದೆ ಎಂದು ವೆಂಕಪ್ಪ ಗೌಡ ಹೇಳಿದರು. ವಾರ್ಡಿನ 160ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿದ್ದೇನೆ ಎಂದರು.