ಸುಳ್ಯ:ಬಿಜೆಪಿ ಬಿಡಿಒ ಶಕ್ತಿ ಕೇಂದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆ ಆಚರಿಸಲಾಯಿತು. ದೀನ್ ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚಲಾಯಿತು. ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ ದೀನ್ ದಯಾಳ್ ಉಪಾಧ್ಯಯರ ಬಗ್ಗೆ
ಬೌದ್ಧಿಕ್ ನೀಡಿದರು.ನಗರ ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಕುಸುಮಾಧರ.ಎ.ಟಿ, ಮಾತನಾಡಿದರು. ನಗರ ಪಂಚಾಯತ್ ಸದಸ್ಯರಾದ ಪೋಜಿತ, ಸುಧಾಕರ್ ಕುರುಂಜಿಭಾಗ್, ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ, ಬೆಜೆಪಿ ಮಂಡಲ ಕಾರ್ಯಕಾರಿಣಿ ಸದಸ್ಯರಾದ ಬೂಡು ರಾಧಾಕೃಷ್ಣ ರೈ, ಜಿನ್ನಪ್ಪ ಪೂಜಾರಿ,ಯುವ ಮೋರ್ಚಾ ಮಂಡಲ ಉಪಾಧ್ಯಕ್ಷ ಸುನಿಲ್ ಕೇರ್ಪಳ, ದಯಾನಂದ ಕೇರ್ಪಳ ಚಂದ್ರಶೇಖರ ಕೇರ್ಪಳ, ಕಿರಣ ಕುರುಂಜಿ, ಚಂದ್ರಶೇಖರ ರಾವ್ ಕೇರ್ಪಳ, ರಘುರಾಮ ಕೇರ್ಪಳ, ಪ್ರದೀಪ್ ರೈ ಬೂಡು, ಮಾಧವ ರಾವ್ ಪರಿವಾರ, ಗೋಪಾಲ. ಎಸ್. ನಡುಬೈಲ್,ಉಮೇಶ್ ಪ್ರಭು ಉಪಸ್ಥಿತರಿದ್ದರು.. ದಯಾನಂದ ಕೇರ್ಪಳ ಸ್ವಾಗತಿಸಿ ಸುನಿಲ್ ಕೇರ್ಪಳ ವಂದಿಸಿದರು.





