ಸುಳ್ಯ:ಬಿಜೆಪಿ ಬೆಳ್ಳಾರೆ ಶಕ್ತಿ ಕೇಂದ್ರದ ವತಿಯಿಂದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ಶಾಸಕರ ಮನೆಯಲ್ಲಿ ಆಚರಿಸಲಾಯಿತು. ಉಪಾಧ್ಯಾಯರ ಆದರ್ಶಗಳನ್ನು, ತತ್ವಸಿದ್ದಂತಗಳನ್ನು ಮಂಡಲ ಸಮಿತಿ ಸದಸ್ಯರಾದ ವಸಂತ ನಡುಬೈಲು ತಿಳಿಸಿದರು. ಈ ಸಂದರ್ಭದಲ್ಲಿ
ಶಾಸಕರಾದ ಭಾಗೀರಥಿ ಮುರುಳ್ಯ,ಬೆಳ್ಳಾರೆ ಮಹಾಶಕ್ತಿಕೇಂದ್ರ ಕಾರ್ಯದರ್ಶಿ ಅನೂಪ್ ಬಿಳಿಮಲೆ, ಶಕ್ತಿಕೇಂದ್ರ ಪ್ರಮುಖ ವಸಂತ ಹುದೇರಿ,ಬೂತ್ ಸಮಿತಿ ಅಧ್ಯಕ್ಷ ಅಶೋಕ್ ರೈ ಊರುಸಾಗು, 84ನೇ ಬೂತ್ ಸಮಿತಿ ಅಧ್ಯಕ್ಷ ನೇಮಿಶ ಕಡಿರ, ಬೂತ್ ಕಾರ್ಯದರ್ಶಿ ರಾಜೇಶ್ ನಳಿಯಾರು,ಮುರುಳ್ಯ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಾನಕಿ ಮುರುಳ್ಯ, ಸದಸ್ಯರಾದ ಮೊನಪ್ಪ ಅಲೆಕ್ಕಿ, ಕರುಣಾಕರ ಹುದೇರಿ,ಸುಂದರ ಪಾಪುತ್ತಡಿ, ಶೀಲಾವತಿ ಗೊಳ್ತಿಲಾ, ಪುಷ್ಪವತಿ ಪ್ರಮುಖರಾದ ರಾಧಾಕೃಷ್ಣ ನಳಿಯಾರು, ಶೇಖರ ಸಾಲಿಯಾನ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.