ಸುಳ್ಯ: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಅಂಗವಾಗಿ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಅ.14 ರಂದು ಗಡಿ ಗ್ರಾಮವಾದ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅ.14 ರಂದು ಸಂಜೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ಮಂಡೆಕೋಲಿಗೆ ಆಗಮಿಸಲಿದ್ದಾರೆ.ಸಂಜೆ ಮುರೂರು ಚೆಕ್ ಪೋಸ್ಟ್ ಭೇಟಿ
ನೀಡಲಿದ್ದಾರೆ.ಸಂಜೆ 6.ಗಂಟೆಗೆ ಮಂಡೆಕೋಲಿಗೆ ಆಗಮಿಸುವರು.6.30ಕ್ಕೆ ಪುತ್ಯ ಶಾಲೆಗೆ ಭೇಟಿ ನೀಡುವರು. ಅಲ್ಲಿ ಗ್ರಾಮದ ಜನರ ಜೊತೆ ಗ್ರಾಮ ಚಾವಡಿ ಕಾರ್ಯಕ್ರಮ ಹಾಗೂ ಮುಕ್ತ ಚರ್ಚೆಯಲ್ಲಿ ಭಾಗವಹಿಸುವರು. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದ ಹಿನ್ನಲೆಯಲ್ಲಿ ಸ್ಥಳೀಯರು ಸಾಂಸ್ಕೃತಿಕ ಕಾರ್ಯಕ್ರಮ ಎರ್ಪಡಿಸಲಾಗಿದೆ. ರಾತ್ರಿ ಅವರು ಮಂಡೆಕೋಲಿನಲ್ಲಿ ವಾಸ್ತವ್ಯ ಮಾಡುವರು. ಅ.15 ರಂದು ಬೆಳಗ್ಗೆ ಗ್ರಾಮದ ಕೆಲವು ಸರಕಾರಿ ಶಾಲೆಗಳಿಗೆ, ಗ್ರಂಥಾಲಯ ಮತ್ತಿತರ ಕಡೆ ಭೇಟಿ ನೀಡುವರು.
ಬೆಳಿಗ್ಗೆ ಗಂಟೆ 10 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ಮಂಡೆಕೋಲು ಯಲ್ಲಿ ಅಹವಾಲು ಸ್ವೀಕಾರ ನಡೆಯುವುದು. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಕೈಗೊಂಡಿರುವ ಕಾರಣ ಗ್ರಾಮದ ಹಲವು ಸಮಸ್ಯೆಗಳ ಪರಹಾರ ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.