ನವದೆಹಲಿ: ಸಮೀರ್ ರಿಸ್ವಿ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಐಪಿಎಲ್ನಲ್ಲಿ ಇಂದು ನಡೆದ ಪಂದ್ಯದಲ್ಲಿ
ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್ಗಳ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ
20 ಓವರ್ಗಳಲ್ಲಿ 6 ವಿಕೆಟ್ಗೆ 162 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಪಡೆ ಕೇವಲ 4 ವಿಕೆಟ್ಗಳನ್ನು ಕಳೆದುಕೊಂಡು, ಇನ್ನೂ 10 ಎಸೆತ ಇರುವಂತೆಯೇ 163 ರನ್ ಗಳಿಸಿ ಗೆದ್ದು ಬೀಗಿತು.
ಡೆಲ್ಲಿ ಪರ ಯುವ ಬ್ಯಾಟರ್ ಸಮೀರ್ ರಿಸ್ವಿ 51 ಎಸೆತಗಳಲ್ಲಿ ತಲಾ 7 ಸಿಕ್ಸರ್ ಹಾಗೂ ಬೌಂಡರಿ ನೆರವಿನಿಂದ 90 ರನ್ ಗಳಿಸಿದರು. ಪಾತುಂ ನಿಸಂಗ 44 ರನ್ ಗಳಿಸಿದರು. ಮುಂಬೈ ಪರ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ಅರ್ಧ ಶತಕ(51) ಗಳಿಸಿ ತಂಡಕ್ಕೆ ಆಸರೆಯಾದರು. ರೋಹಿತ್ ಶರ್ಮ 35 ರನ್ ಗಳಿಸಿದರು.








