ವಿಶಾಖಪಟ್ಟಣಂ: ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 65 ರನ್ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ಡೆಲ್ಲಿ ಕ್ಯಾಪಿಟಲ್ಸ್ಗೆ ಅಮೋಘ ಬ್ಯಾಟಿಂಗ್ ಮೂಲಕ ಇಂಪ್ಯಾಕ್ಟ್ ಪ್ಲೇಯರ್ ಅಶುತೋಶ್ ಶರ್ಮ ಹಾಗೂ ವಿಪ್ರಾಜ್ ನಿಗಂ 1 ವಿಕೆಟ್ನ ರೋಚಕ ಗೆಲುವು ತಂದು ಕೊಟ್ಟರು. ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ಜೈಂಟ್ 20 ಓವರ್ಗಲ್ಲಿ
8 ವಿಕೆಟ್ ಕಳೆದುಕೊಂಡು 209 ರನ್ಗಳ ಬೃಹತ್ ಮೊತ್ತ ಗಳಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 19.3 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಗೆಲುವಿನ ನಗೆ ಬೀರಿತು. 5 ವಿಕೆಟ್ 65 ರನ್ಗೆ ನಷ್ಟವಾಗಿದ್ದ ಡೆಲ್ಲಿಗೆ ಅಶುತೋಶ್ ಹಾಗೂ ಟಿಸ್ಟನ್ ಸ್ಟಬ್ 6ನೇ ವಿಕೆಟ್ಗೆ 48 ರನ್ ಜೊತೆಯಾಟ ನೀಡಿ ಜೀವ ತುಂಬಿದರು. ಈ ಹಂತದಲ್ಲಿ 22 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ಗಳಿದ್ದ 34 ರನ್ ಗಳಿಸಿ ಸ್ಟಬ್ ಔಟ್ ಆದರು. ಬಳಿಕ ಅಶುತೋಶ್ ಹಾಗೂ ವಿಪ್ರಾಜ್ ನಿಗಂ ಅಕ್ಷರಷಃ ಅಬ್ಬರಿಸಿದರು. ಇವರು 7ನೇ ವಿಕೆಟ್ಗೆ 22 ಎಸೆತಗಳಲ್ಲಿ 55 ರನ್ಗಳ ಸ್ಪೋಟಕ ಜೊತೆಯಾಟ ಕಟ್ಟಿದರು. 15 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಹೀತ 39 ರನ್ ಗಳಿಸಿ ವಿಪ್ರಾಜ್ ಔಟ್ ಆದರು. ಬಳಿಕ ಎರಡು ವಿಕೆಟ್ ನಷ್ಟವಾದರೂ ಅಶುತೋಶ್ ಹೋರಾಟ ಮುಂದುವರಿಸಿ ತಂಡಕ್ಕೆ ಜಯದ ಕಾಣಿಕೆಯಿತ್ತರು. ಅಶುತೋಶ್ 32 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ಗಳಿದ್ದ ಅಜೇಯ 66 ರನ್ ಬಾರಿಸಿದರು.
ಇದಕ್ಕೂ ಮುನ್ನಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಖನೌಗೆ ಸ್ಫೋಟಕ ಆರಂಭ ಲಭಿಸಿತು. ಮಿಚೆಲ್ ಮಾರ್ಷ್ 36 ಎಸೆತಗಳಲ್ಲಿ ತಲಾ 6 ಬೌಂಡರಿ ಹಾಗೂ ಸಿಕ್ಸರ್ಗಳಿದ್ದ 72 ರನ್ ಗಳಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ನಿಕೊಲಸ್ ಪೂರನ್ ಬ್ಯಾಟ್ನಿಂದ ಸಿಕ್ಸರ್ ಬೌಂಡರಿಗಳ ಸುರಿಮಳೆಯೇ ಆಯಿತು. 75 ರನ್ ಗಳಿಸಿದ ಅವರ ಇನಿಂಗ್ಸ್ನಲ್ಲಿ 7 ಸಿಕ್ಸರ್, 6 ಬೌಂಡರಿಗಳಿದ್ದವು.
ನಾಯಕ ರಿಷಬ್ ಪಂತ್ ಆರು ಎಸೆತ ಎದುರಿಸಿದರೂ ಖಾತೆ ತೆರಯದೆ ಪೆವಿಲಿಯನ್ಗೆ ನಡೆದರು. ಕೊನೆ ಎರಡು ಎಸೆತಗಳಲ್ಲಿ ಮಿಲ್ಲರ್ ಎರಡು ಸಿಕ್ಸರ್ ಬಾರಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಡೆಲ್ಲಿ ಪರ ಕುಲದೀಪ್ ಯಾದವ್ 2, ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರು.