ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ವತಿಯಿಂದ ಅಕ್ಟೋಬರ್ 16 ರಿಂದ 24 ರವರೆಗೆ ನಗರದ ಗಾಂಧಿ ಮೈದಾವದಲ್ಲಿ ಆಯೋಜಿತ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರು, ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಲಾವಿದರು, ಕಲಾತಂಡಗಳು ಅಜಿ೯ ನಮೂನೆಯನ್ನು
madikeridasara.com ವೆಬ್ ಸೈಟ್ನಿಂದ ಪಡೆದುಕೊಂಡು ಸೆಪ್ಟಂಬರ್ 26 ರೊಳಗಾಗಿ madikeridasara@gmail.com ಇಮೇಲ್ ಮೇಲ್ ಮಾಡಬೇಕು. ಅಥವಾ ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿ ಕೇರಾಫ್ ಮಡಿಕೇರಿ ನಗರ ದಸರಾ ಸಮಿತಿ ಕಛೇರಿಗೆ ಸಲ್ಲಿಸಬೇಕಾಗಿದೆ. ನಿಗಧಿತ ದಿನಾಂಕದ ನಂತರ ಬಂದ ಅಜಿ೯ಗಳನ್ನು ಪರಿಗಣಿಸಲಾಗುವುದಿಲ್ಲ. ಅಜಿ೯ ಸಲ್ಲಿಸುವವರು ನಿಗಧಿ ನಮೂನೆಯಲ್ಲಿಯೇ ಮಾಹಿತಿ ನೀಡುವಂತೆ ದಸರಾ ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ಪ್ರಕಟಣೆಯಲ್ಲಿ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪಕ೯ ತೆನ್ನಿರಾ ಮೈನಾ. ಸಂಚಾಲಕರು, ಸಾಂಸ್ಕೖತಿಕ ಸಮಿತಿ 9449156215 , ಕುಡೆಕಲ್ ಸಂತೋಷ್ 8762110948.









