ಸುಳ್ಯ: ಸುಳ್ಯ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ದಸರಾ ಉತ್ಸವ ಸಮಿತಿ, ಶ್ರೀ ಶಾರದಾಂಬಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ 52 ನೇ ವರ್ಷದ ದಸರಾ ಉತ್ಸವದ ಶ್ರೀ ಶಾರದಾ ದೇವಿಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ವಿವಿಧ ಸ್ತಬ್ಧ ಚಿತ್ರಗಳ ನೇತೃತ್ವ ವಹಿಸಿಕೊಂಡ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ
ಅಭಿನಂದನಾ ಸಮಾರಂಭವು ಕಾನತ್ತಿಲ ಕಾಂಪ್ಲೆಕ್ಸ್ನಲ್ಲಿ ನಡೆಯಿತು. ಎಸ್.ಸಿಕ್ಸ್ ಗೌರವಾಧ್ಯಕ್ಷ ಗೋಕುಲ್ ದಾಸ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾರದಾಂಬಾ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾರಾಯಣ ಕೇಕಡ್ಕ ಸಹಕರಿಸಿದ ಸಂಘ ಸಂಸ್ಥೆಯವರಿಗೆ ಅಭಿನಂದನೆ ಸಲ್ಲಿಸಿದರು.
ಎಸ್.ಸಿಕ್ಸ್ ಅಧ್ಯಕ್ಷ ಚಿದಾನಂದ ವಿದ್ಯಾ ನಗರ, ಸಮಿತಿ ಪದಾಧಿಕಾರಿಗಳಾದ ಬೂಡು ರಾಧಾಕೃಷ್ಣ ರೈ, ರವಿಚಂದ್ರ ಕೊಡಿಯಾಲಬೈಲು, ಪುರುಷೋತ್ತಮ ನಾವೂರು, ಸತೀಶ್ ಹಳೆಗೇಟು, ದೀಪಕ್ ಪಿ.ಎಸ್. ವಿಷ್ಣು ಸರ್ಕಲ್, ಅನಿಲ್ ಕುಮಾರ್ ಕೆ.ಸಿ ಪರಿವಾರಕಾನ, ಪ್ರದೀಪ್ ಕೆ.ಯನ್, ಪದ್ಮನಾಭ ಎ.ಪಿ, ಕೆ.ಉದಯಕುಮಾರ್, ಸುನಿಲ್ ಕೇರ್ಪಳ, ಭವಾನಿ ಶಂಕರ ಕಲ್ಮಡ್ಕ ಮತ್ತಿತರರು ಉಪಸ್ಥಿತರಿದ್ದರು.ಸಹಕಾರ ನೀಡಿದ ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಶಾರದಾ ದೇವಿಯ ಭಾವಚಿತ್ರವಿರುವ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬೂಡು ರಾಧಾಕೃಷ್ಣ ರೈ ಸ್ವಾಗತಿಸಿದರು. ರವಿಚಂದ್ರ ಕೊಡಿಯಾಲಬೈಲು ವಂದಿಸಿದರು.