ಮುಕ್ಕೂರು: ಮುಕ್ಕೂರು ನೇಸರ ಯುವಕ ಮಂಡಲದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆದ ದಶಪ್ರಣತಿ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಲೋಕವೇ ಧರೆಗಿಳಿಯಿತು. ಶಿವದೂತ ಗುಳಿಗ ನಾಟಕಕ್ಕೆ 1500 ಕ್ಕೂ ಅಧಿಕ ಮಂದಿ ಭಾಗವಹಿಸುವ ಮೂಲಕ
ಇತಿಹಾಸ ಸೃಷ್ಟಿಸಿತು. ಪುಟಾಣಿಗಳು, ಶಾಲಾ ವಿದ್ಯಾರ್ಥಿಗಳು, ಊರವರು, ನಾಡಿನ ವಿವಿಧ ಭಾಗದಿಂದ ಆಗಮಿಸಿದ ಕಲಾವಿದರು ನೀಡಿದ ಪ್ರದರ್ಶನ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ಸಿಯಾಯಿತು.
ಆಕರ್ಷಕ ವೇದಿಕೆ:
ಮುಕ್ಕೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಎಂಬಂತೆ ದೇಸೀ ಸೊಗಡಿನಲ್ಲಿ ಮೂಡಿ ಬಂದಿದ್ದ ವೇದಿಕೆಯಲ್ಲಿ ನೃತ್ಯಲೋಕ, ನಾಟಕ ಸಹಿತ

ವಿವಿಧ ಕಲಾಪ್ರಕಾರಗಳು ಪ್ರೇಕ್ಷಕರನ್ನು ಮೋಡಿ ಮಾಡಿತು. ಮುಕ್ಕೂರು ಅಂಗನಾಡಿ, ಶಾಲಾ ವಿದ್ಯಾರ್ಥಿಗಳು, ಪುಣ್ಚಪ್ಪಾಡಿ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ ಮೂಡಿ ಬಂದರೆ, ಪದಯಾನ ತಂಡದಿಂದ ಭರತನಾಟ್ಯ ನಾಟ್ಯಾಂಜಲಿ ಅತ್ಯಾಕರ್ಷಕವಾಗಿತ್ತು. ನೇಸರ ಯುವಕ ಮಂಡಲದ ಸದಸ್ಯರು ಅಭಿಯನಿಸಿದ ಕಿರುನಾಟಕಕ್ಕೂ ಮೆಚ್ಚುಗೆ ವ್ಯಕ್ತವಾಯಿತು.













