ಪಂಜ:ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾಗಿ ಕರ್ನಾಟಕ ಸರಕಾರದಿಂದ ನೇಮಕವಾಗಿರುವ ಲಕ್ಷ್ಮೀಶ ಗಬ್ಲಡ್ಕ ರವರು ಇಂದು ಸೀಮೆ ದೇವಸ್ಥಾನವಾದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್, ಪ್ರಧಾನ ಅರ್ಚಕರಾದ

ರಾಮಚಂದ್ರ ಬಟ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಧರ್ಮ
ಪಾಲ ಗೌಡ ಮರಕಡ ಕಾಚಿಲ, ಸಂತೋಷ್ ಕುಮಾರ್ ರೈ ಬಳ್ಪ, ಧರ್ಮಣ್ಣ ನಾಯ್ಕ ಗರಡಿ, ಸತ್ಯನಾರಾಯಣ ಭಟ್ ಕಾಯಂಬಾಡಿ, ಮಾಯಿಲಪ್ಪ ಗೌಡ ಎಣ್ಮೂರು,ಶ್ರೀಮತಿ ಪವಿತ್ರ ಮಲ್ಲೇಟ್ಟಿ, ಶ್ರೀಮತಿ ಮಾಲಿನಿ ಕುದ್ವ, ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಜಿತ್ ಭಟ್ ಪಂಜ ಬೀಡು ಉಪಸ್ಥಿತರಿದ್ದರು. ದೇವಳದ ವತಿಯಿಂದ ಶಾಲು ಹೊದಿಸಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಕಾನತ್ತೂರ್ ಅವರು ಅಭಿನಂದಿಸಿದರು.







