ಸುಳ್ಯ:ಕನ್ನಡ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಮಕ್ಕಳಲ್ಲಿ ಸಂಸ್ಕಾರವನ್ನು ಬೆಳೆಸಿ ಸಮಗ್ರ ಶಿಕ್ಷಣ ನೀಡುತ್ತಿರುವುದಕ್ಕಾಗಿ ಬೆಂಗಳೂರಿನ ಎರಡು ಇಂಗ್ಲೀಷ್ ಮೀಡಿಯಂ ಶಾಲೆಗಳವರು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಅವರನ್ನು ಸನ್ಮಾನಿಸಲಾಯಿತು.
ನಿಸರ್ಗ ನಿಕೇತನ ಶಾಲೆಯಲ್ಲಿ ದಾಮ್ಲೆಯವರು ಶಿಕ್ಷಕಿಯರಿಗೆ ತರಬೇತಿ ನಡೆಸಿದರು. ಝೆನ್ ಶಾಲೆಯಲ್ಲಿ ಏರ್ಪಡಿಸಿದ್ದ ಗ್ರಾಂಡ್ ಪೇರೆಂಟ್ಸ್ ಡೇಯಲ್ಲಿ ಮುಖ್ಯ ಅತಿಥಿಯಾಗಿ ಮಕ್ಕಳನ್ನು ಬೆಳೆಸುವ ಉಪಾಯಗಳ ಬಗ್ಗೆ ಮಾತಾಡಿದರು.ಝೆನ್ ಶಾಲೆಯ ಪ್ರಾಂಶುಪಾಲೆ ಉಬರಡ್ಕದ ಪ್ರಶಾಂತಿ ರಾವ್ ಕೊನೆಯಲ್ಲಿ ವಂದಿಸಿದರು.












